Saturday, January 18, 2025

Bigg Boss: ಕಾರ್ತಿಕ್​ ಮಹೇಶ್​ಗೆ ಒಲಿದ ಬಿಗ್​ಬಾಸ್​ ಸೀಸನ್​ 10ರ ಕಿರೀಟ

ಬೆಂಗಳೂರು: ಅಸಮರ್ಥರಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟ ಕಾರ್ತಿಕ್ ಮಹೇಶ್ ಬಿಗ್ ಬಾಸ್ ಸೀಸನ್ 10ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಮೊದಲ ದಿನದಿಂದಲೂ ಉತ್ತಮವಾಗಿ ಆಟವಾಡುತ್ತಾ ಅಭಿಮಾನಿಗಳ ಮನಗೆದ್ದಿದ್ದರು. ಸಂಗೀತಾ ಮತ್ತು ನಮ್ರತಾ ಗೌಡ ಜೊತೆಗಿನ ಸ್ನೇಹ ವಿಚಾರವಾಗಿ ಕಾರ್ತಿಕ್ ಸಖತ್ ಹೈಲೆಟ್ ಆಗಿದ್ದರು.

ವಿನಯ್‌ಗೆ ಎದುರಾಗಿ ನಿಂತು ಸಾಕಷ್ಟು ಟಾಸ್ಟ್‌ಗಳಲ್ಲಿ ಕಾರ್ತಿಕ್ ಠಕ್ಕರ್ ಕೊಟ್ಟಿದ್ದರು. ಡ್ಯಾನ್ಸ್, ಮನರಂಜನೆ ಎಲ್ಲದರಲ್ಲೂ ಕಾರ್ತಿಕ್ ಮಹೇಶ್ ಹೈಲೆಟ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ 10ರಲ್ಲಿ ಅಭಿಮಾನಿಗಳ ಹೃದಯ ಗೆದ್ದು ವಿನ್ನರ್ ಆಗಿ ಗೆದ್ದು ಬೀಗಿದ್ದಾರೆ.

ಕಡೆಯದಾಗಿ ಸಂಗೀತಾ, ಪ್ರತಾಪ್ ಜೊತೆ ಕಾರ್ತಿಕ್‌ಗೆ ಪೈಪೋಟಿ ಇತ್ತು. ಈಗ ಕಾರ್ತಿಕ್ ಬಿಗ್ ಬಾಸ್ ವಿನ್ನರ್ ಆಗಿ ಸಂಭ್ರಮಿಸಿದ್ದಾರೆ.

ತೀವ್ರ ಪೈಪೋಟಿ ನಡುವೆ ಗೆದ್ದ ಮಹೇಶ್ ಪ್ರತಿಭಾವಂತ ನಟ ಮಹೇಶ್ ಕಾರ್ತಿಕ್ ಟಾಪ್ ಮೂರರ ರೇಸ್‌ನಲ್ಲಿದ್ದರು. ಸಹ ಫೈನಲಿಸ್ಟ್‌ಗಳಾದ ಸಂಗೀತಾ ಶೃಂಗೇರಿ ಮತ್ತು ಡ್ರೋನ್ ಪ್ರತಾಪ್ ಅವರೊಂದಿಗೆ ಭಾರಿ ಪೈಪೋಟಿ ಇದ್ದರೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಗೀತಾ ಶೃಂಗೇರಿ 2ನೇ ರನ್ನರ್ ಅಪ್ ಆಗಿದ್ದರೆ, ಡ್ರೋನ್ ಪ್ರತಾಪ್ ಮೊದಲ ರನ್ನರ್ ಆಗಿದ್ದಾರೆ.

 

RELATED ARTICLES

Related Articles

TRENDING ARTICLES