ಬೆಂಗಳೂರು : ಬಿಹಾರದ ನೂತನ ಸಿಎಂ ಆಗಿ ನಿತೀಶ್ ಕುಮಾರ್ ಇಂದು 9ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು.
ನಿತೀಶ್ ಜೊತೆಗೆ ಬಿಜೆಪಿಯ ಸಾಮ್ರಾಟ್ ಚೌಧರಿ ಹಾಗೂ ವಿಜಯ್ ಸಿನ್ಹಾ ಅವರು ಉಪಮುಖ್ಯಮಂತ್ರಿ ಆಗಿ ಹಾಗೂ ಇತರೆ ಎಂಟು ಮಂದಿ ಶಾಸಕರು ನೂತನ ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ.
ಪಕ್ಷಗಳನ್ನು ಬದಲಿಸುವ ಹಾಗೂ ವಿವಿಧ ಪಕ್ಷಗಳೊಂದಿಗೆ ಮೈತ್ರು ಮಾಡಿಕೊಳ್ಳುವ ಮೂಲಕ 2000ನೇ ಇಸವಿಯಿಂದ ಈವರೆಗೆ 18 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಆಡಳಿತ ನಡೆಸಿದ್ದಾರೆ.
ನಿತೀಶ್ ಉಲ್ಟಾ ಹೊಡೆಯುವುದು ಗೊತ್ತಿತ್ತು
ನಿತೀಶ್ ಕುಮಾರ್ ರಾಜೀನಾಮೆ ಕುರಿತು ತೇಜಸ್ವಿ ಯಾದವ್ ಹಾಗೂ ಲಾಲು ಪ್ರಸಾದ್ ಯಾದವ್ ಸುಳಿವು ನೀಡಿದ್ದು ಇಂದು ನಿಜವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಇಂತಹ ಅನೇಕ ರಾಮರು ದೇಶದಲ್ಲಿ ಬಂದು ಹೋಗಿದ್ದಾರೆ. ಇಂಡಿಯಾ ಮೈತ್ರಿಗಾಗಿ ನಾವು ಮೌನವಾಗಿದ್ದೇನೆ. ಯಾವುದೇ ತಪ್ಪು ಸಂದೇಶ ರವಾನೆಯಾಗಬಾರದು ಎಂಬ ಕಾರಣದಿಂದ ನಾವು ಮಾತನಾಡಿರಲಿಲ್ಲ ಎಂದು ತಿಳಿಸಿದ್ದಾರೆ.