Saturday, January 18, 2025

ಆರು ತಿಂಗಳ ಹಿಂದೆ ಶೆಟ್ಟರ್ ವಾಪಸ್ ಬರೋದಾಗಿ ಹೇಳಿದ್ದೆ : ಪ್ರಲ್ಹಾದ್ ಜೋಶಿ

ಹುಬ್ಬಳ್ಳಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಬಂದಿರೋದು ಸಂತೋಷ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಹಳ ಖುಷಿಯಾಗಿದ್ದೇನೆ. ಅವತ್ತು ಜಗದೀಶ್ ಶೆಟ್ಟರ್ ಘರವಾಪ್ಸಿ ಕುರಿತು ನನಗೆ ಹೇಳಿದ್ರು. ನಾನು ಆರು ತಿಂಗಳ ಹಿಂದೆ ಅವರು ವಾಪಸ್ ಬರೋದಾಗಿ ಹೇಳಿದ್ದೆ ಎಂದು ತಿಳಿಸಿದರು.

ನನಗೆ ದೊಡ್ಡವರ ಜೊತೆ ಮೀಟಿಂಗ್ ಇತ್ತು. ಹಾಗಾಗಿ ಶೆಟ್ಟರ್ ಪಕ್ಷ ಸೇರ್ಪಡೆಗೆ ಹೋಗೋಕೆ ಆಗಿಲ್ಲ. ನಾವು ಈ ಬಾರಿ 28ಕ್ಕೆ 28 ಸ್ಥಾನ ಗೆಲ್ಲಬೇಕು. ಅಕಸ್ಮಾತ್ ಜಗದೀಶ್ ಶೆಟ್ಟರ್ ಸೇರ್ಪಡೆ ಕುರಿತು ನನ್ನ ವಿರೋಧ ಇಲ್ಲ. ವಿರೋಧ ಇದ್ರೆ ನಾನು ನಿಮಗೆ ಹಳುತ್ತಿದ್ದೆ ಎಂದು ಹೇಳಿದರು.

ಲಕ್ಷ್ಮಣ ಸವದಿ ಬಂದರೂ ಸ್ವಾಗತ

ಶೆಟ್ಟರ್ ಬಂದಿರೋದು ಸಂತೋಷ, ಉಳದಿರೋದು ಅವರನ್ನ ಕೇಳಿ. ಸ್ಥಳೀಯ ನಾಯಕರಿಗೆ ಮಾಹಿತಿ ಇತ್ತು. ನಾನು ದೆಹಲಿಯಲ್ಲಿದ್ದೆ, ಅರವಿಂದ ಬೆಲ್ಲದ್ ನನ್ಮ ಜೊತೆ ಇರಲಿಲ್ಲ. ಆದ್ರೆ, ಹಿಂದಿನ ದಿನ ಬೆಲ್ಲದ್ ಜೊತೆ ಇದ್ರು. ನಮಗೆ ಲಿಂಗಾಯತ ಸೇರಿ ಎಲ್ಲರೂ ಬೇಕು. ಲಕ್ಷ್ಮಣ ಸವದಿ ಅವರಲ್ಲಿ ನಮ್ಮ ವೈಚಾರಿಕತೆ ರಕ್ತ ಇದೆ. ಅವರು ಬಂದರೂ ಸ್ವಾಗತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.

RELATED ARTICLES

Related Articles

TRENDING ARTICLES