Monday, January 27, 2025

ನಾನೇನು ಪವರ್ ಸೆಂಟರ್ ಅಲ್ಲ, ಡಿಸಿಎಂ ಸದ್ಯಕ್ಕಿಲ್ಲ : ಸತೀಶ್ ಜಾರಕಿಹೊಳಿ

ಹಾವೇರಿ : ಸತೀಶ್ ಜಾರಕಿಹೊಳಿ ಕಾಂಗ್ರೆಸ್​ನಲ್ಲಿ ಪವರ್ ಸೆಂಟರ್ ಆಗ್ತಿದ್ದಾರೆಯೇ? ಎಂಬ ಪ್ರಶ್ನೆಗೆ ಖುದ್ದು ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ನಾವೇನು ಪವರ್ ಸೆಂಟರ್ ಅಲ್ಲ ಎಂದು ಹೇಳಿದ್ದಾರೆ

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪಕ್ಷದಲ್ಲಿ ಇದಿವಿ ಅಷ್ಟೇ, ಹೊರಗಡೆ ಏನು ಹೋಗಿಲ್ಲ. ಇದ್ದಲ್ಲೇ ಮಾಡ್ತಿದಿವಿ ಅಷ್ಟೇ, ಸಮಾನ ಮನಸ್ಕರರು ಕೂಡಿದ್ವಿ ಹೊರತಾಗಿ ಪವರ್ ಸೆಂಟರ್ ಏನು ಅಲ್ಲ ಎಂದು ತಿಳಿಸಿದ್ದಾರೆ

3 ಡಿಸಿಎಂ ವಿಚಾರ ಕುರಿತು ಮಾತನಾಡಿ, ಡಿಸಿಎಂ ಈಗ ಸದ್ಯಕ್ಕೆ ಇಲ್ಲ. ಲೋಕಸಭಾ ಚುನಾವಣೆ ಬಗ್ಗೆ ಫೋಕಸ್ ಮಾಡ್ತಿದಿವಿ. ಚುನಾವಣೆ ಮೇಲೆ ಹೆಚ್ಚು ಗಮನಹರಿಸಿದಿವಿ. ಸದ್ಯಕ್ಕಂತೂ ಅದರ ಅವಷ್ಯಕತೆ ಇಲ್ಲ. ಚುನಾವಣೆ ಬಳಿಕ ಕೇಳೋಣ, ಮತ್ತೊಂದು ಸರಿ ಕೇಳ್ತೀನಿ. ನಮ್ಮ ಹೈಕಮಾಂಡ್ ಇದೆ, ಹೈಕಮಾಂಡ್ ಜೊತೆ ಚರ್ಚೆ ಮಾಡ್ತೀನಿ ಎಂದು ಹೇಳಿದ್ದಾರೆ.

ಸಿಎಂ ಆಗಬೇಕೆಂಬ ಆಸೆ ಇದೆಯಾ?

ಸಿಎಂ ಕೂಡಾ ಆಗಬೇಕು ಎಂಬ ಆಸೆ ಇದೆಯಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ಸದ್ಯಕ್ಕೆ ಆ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು. ಬಿಜೆಪಿಯವರು ರಾಮಮಂದಿರ ಎನ್ಕ್ಯಾಷ್ ಮಾಡ್ತಾರೆ. ನಮಗೆ ನಮ್ದೇ ವೋಟ್ ಬ್ಯಾಂಕ್ ಇದೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES