Monday, December 23, 2024

ಪೋಪ್ ಭರ್ಜರಿ ಶತಕ, ಭಾರತಕ್ಕೆ ಇಂಗ್ಲೆಂಡ್ ತಿರುಗೇಟು

ಬೆಂಗಳೂರು : ಇಂಗ್ಲೆಂಡ್​ ಮತ್ತು ಭಾರತ ನಡುವಿನ ಮೊದಲ ಟೆಸ್ಟ್​ ಪಂದ್ಯ ಮೂರನೇ ದಿನದ ಅಂತ್ಯಕ್ಕೆ ರೋಚಕ ಘಟ್ಟ ತಲುಪಿದೆ.

ಹೈದರಾಬಾದ್​ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಇಂಗ್ಲೆಂಡ್​ ದೊಡ್ಡ ಟಾರ್ಗೆಟ್ ನೀಡಲು ಹೋರಾಡುತ್ತಿದೆ. ಎರಡನೇ ಇನ್ನಿಂಗ್ಸ್​ನ ಮೂರನೇ ದಿನದಾಟಕ್ಕೆ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು 316 ರನ್ ಗಳಿಸಿದೆ. ಈ ಮೂಲಕ 126 ರನ್​ಗಳ ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್ ಪರ ಪೋಪ್ ಓಲಿ ಆಕರ್ಷಕ ಶತಕ (148*)​, ಬೆನ್ ಡಕೆಟ್ 47, ಫೋಕ್ಸ್​ 34, ಕ್ರಾಲಿ 31 ರನ್​ ಸಿಡಿಸಿದ್ದಾರೆ. ಭಾರತದ ಪರ ಜಸ್ಪ್ರೀತ್​ ಬೂಮ್ರಾ ಹಾಗೂ ಆರ್. ಅಶ್ವಿನ್ ತಲಾ ಎರಡು ವಿಕೆಟ್, ರವೀಂದ್ರ ಜಡೇಜಾ ಹಾಗೂ ಅಕ್ಸರ್ ಪಟೇಲ್ ತಲಾ ಒಂದು ವಿಕೆಟ್ ಪಡೆಸಿದ್ದಾರೆ.

ಪೋಪ್ ಮತ್ತು ಸ್ಟೋಕ್ಸ್ 112 ರನ್‌ ಜತೆಯಾಟ

ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 264 ರನ್ ಗಳಿಸಿತ್ತು. ಭಾರತ 436 ರನ್‌ಗಳಿಗೆ ಆಲೌಟ್ ಆಗುವ ಮೂಲಕ 172 ರನ್‌ಗಳ ಮುನ್ನಡೆ ಸಾಧಿಸಿತ್ತು. ಮೂರನೇ ದಿನವಾದ ಇಂದು ಇಂಗ್ಲೆಂಡ್ ಪರ ಆರನೇ ವಿಕೆಟ್‌ಗೆ ಪೋಪ್ ಮತ್ತು ಬೆನ್ ಸ್ಟೋಕ್ಸ್ ಅವರು 112 ರನ್‌ಗಳ ಜತೆಯಾಟ ಆಡಿದರು. ಪೋಪ್ ಅಜೇಯ 148* ಹಾಗೂ 16 ರನ್ ಗಳಿಸಿರುವ ರೆಹಾನ್‌ ಅಹ್ಮದ್ ಕ್ರೀಸ್‌ನಲ್ಲಿ ಇದ್ದಾರೆ.

RELATED ARTICLES

Related Articles

TRENDING ARTICLES