ಬೆಂಗಳೂರು : ಮೊದಲನೆಯದಾಗಿ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ವಂದನೆ ಹೇಳ್ತೀನಿ. ಅವರು ವಯಸ್ಸಿನಲ್ಲಿ ಅಷ್ಟೇ ಅಲ್ಲ, ಆಲೋಚನೆಯಲ್ಲೂ ಹಿರಿಯರು ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗಕ್ಕೆ ಬಂದಾಗ ಬಿ.ವೈ. ರಾಘವೇಂದ್ರ ಅವರ ಕಾರ್ಯವನ್ನ ಮೆಚ್ಚಿದ್ದಾರೆ. ವಿಪಕ್ಷ ಸಂಸದರ ಕೆಲಸವನ್ನ ಒಬ್ಬ ವ್ಯಕ್ತಿ ಮಾತನಾಡಬಹುದು ಅನ್ನೋದು ಒಂದು ಉದಾಹರಣೆ. ಶಿವಮೊಗ್ಗ ಜಿಲ್ಲೆಗೆ ಬಂದಾಗ ರಾಘವೇಂದ್ರ ಅವರ ಸಾಧನೆ ಏನು ಅಂತ ಹೇಳಿದ್ದಾರೆ ಎಂದು ತಿಳಿಸಿದರು.
ಅನೇಕರು ಗೆದ್ದು ಪಾರ್ಲಿಮೆಂಟ್‌ಗೆ ಹೋಗಿ ಬಂದಿದ್ದು ಮಾತ್ರ ಗೊತ್ತು. ಆದ್ರೆ, ಬಿ.ವೈ. ರಾಘವೇಂದ್ರ ಅವರ ಕೆಲಸ ಕಾಣ್ತಿದೆ. ಶಿವಮೊಗ್ಗ ಏರ್ಪೋರ್ಟ್ ಮಾಡಿದ್ದಾರೆ. ದೆಹಲಿಯಲ್ಲಿ ನಾನು ಅವರ ಜೊತೆ ಹೋಗಿದ್ದೆ. ಒಂದು ನಿಮಿಷವೂ ಕೂರದೆ ಕ್ಷೇತ್ರದ ಕೆಲಸಕ್ಕಾಗಿ ಓಡಾಡ್ತಿದ್ದಾರೆ. ಅವರ ಕೆಲಸವನ್ನ ವಿಪಕ್ಷದವರೂ ಮೆಚ್ಚುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಪರ ನಿಲ್ಲುವಂತೆ ಶ್ರೀರಾಮನ ಆರ್ಶೀವಾದ
ಬಿಹಾರದಲ್ಲಿ ಭಾರಿ ಬದಲಾವಣೆ ಆಗ್ತಿದೆ. ಕಾರಣ ಪ್ರಧಾನಿ ಮೋದಿ ಅವರ ವ್ಯಕ್ತಿತ್ವ. ಗಾಳಿ ಯಾವ ಕಡೆ ಬೀಸ್ತಿದೆ ಅನ್ನೋದು ಗೊತ್ತಾಗ್ತಿದೆ. ಬರುವ ಲೋಕಸಭೆ ಹೊತ್ತಿಗೆ ಭಾರಿ ಬದಲಾವಣೆ ನೋಡಬಹುದು. ಬಿಜೆಪಿ ಪರ ಬಹಳ ಅಲೆ ಇದೆ. ಬಿಜೆಪಿ ಪರ ನಿಲ್ಲುವಂತೆ ಶ್ರೀರಾಮಚಂದ್ರ ಎಲ್ಲರಿಗೂ ಸೂಚಿಸಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.