Wednesday, January 22, 2025

ಸಲಿಂಗ ಕಾಮಕ್ಕೆ ಬಲಿಯಾದ ಬಾಲಕ

ರಾಮನಗರ: ಯುವಕನ ಸಲಿಂಗ ಕಾಮಕ್ಕೆ ಬಾಲಕನೊಬ್ಬ ಬಲಿಯಾಗಿರುವ ಘಟನೆ ನಡೆದಿದೆ.
ನಗರದಲ್ಲಿ ನಿನ್ನೆ ರೈಲ್ವೆ ಹಳಿ ಪಕ್ಕದಲ್ಲಿ ಅನುಮಾನಾಸ್ಪದವಾಗಿ ಬಾಲಕನೊಬ್ಬನ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಕೊಲೆ ಮಾಡಿ ಬಿಸಾಡಿ ಹೋಗಿರುವ ಶಂಕೆ ಮೂಡಿದ್ದು,ಪೊಲೀಸರ್​ ತನಿಖೆಯನ್ನು ಚುರುಕಿನಿಂದ ನಡೆಸಿದ್ದಾಗ ಸತ್ಯ ಹೊರ ಬಂದಿದೆ.
ಬಿಸ್ಕೇಟ್ ಆಸೆ ತೋರಿಸಿ ಕೃತ್ಯ
6 ವರ್ಷದ ಬಾಲಕನಿಗೆ ಬಿಸ್ಕೇಟ್ ಆಸೆ ತೋರಿಸಿ ಪುಸಲಾಯಿಸಿದ್ದಾನೆ. ಬಳಿಕ ಆ ಯುವಕ ಬಸ್ ನಿಲ್ದಾಣದಿಂದ ನಿರ್ಜನ ಪ್ರದೇಶಕ್ಕೆ ಬಾಲಕನನ್ನು ಕರೆದುಕೊಂಡು ಹೋಗಿದ್ದಾನೆ. ಬಲವಂತವಾಗಿ ಬಾಲಕನನ್ನು ಸಲಿಂಗ ಕಾಮಕ್ಕೆ ಬಳಸಿಕೊಂಡಿದ್ದಾನೆ. ತನ್ನ ಕಾಮದ ಆಸೆ ತೀರಿದ ಬಳಿಕ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ತನಿಖೆ ನಡೆಸಿದಾಗ ಯುವಕನ ಕೃತ್ಯ ಬಯಲಾಗಿದೆ.

ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ಸತ್ಯವನ್ನೆಲ್ಲ ಬಾಯ್ಬಿಟ್ಟಿದ್ದಾನೆ.

RELATED ARTICLES

Related Articles

TRENDING ARTICLES