Sunday, December 22, 2024

ಸಂಗೀತ ಮಾಂತ್ರಿಕ ಇಳಯರಾಜ ಪುತ್ರಿ ನಿಧನ!

ಚೆನ್ನೈ: ಸಂಗೀತ ಮಾಂತ್ರಿಕ ಇಳಯರಾಜಾ ಅವರ ಪುತ್ರಿ ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕಿ ಭವತಾರಿಣಿ (47) ಅನಾರೋಗ್ಯದಿಂದ ನಿಧನಹೊಂದಿದ್ದಾರೆ

ಅವರು ಪತಿ, ಉದ್ಯಮಿ ಆರ್. ಶಬರಿರಾಜಾ ಅವರನ್ನು ಅಗಲಿದ್ದಾರೆ. ಸಂಗೀತ ನಿರ್ದೇಶಕರಾದ ಯುವನ್ ಶಂಕರ್ ರಾಜಾ ಮತ್ತು ಕಾರ್ತಿಕ್ ರಾಜಾ ಅವರು ಭವತಾರಿಣಿಯ ಸಹೋದರರು. ಕ್ಯಾನ್ಸರ್‌ಗೆ ತುತ್ತಾಗಿದ್ದ ಭವತಾರಿಣಿ, ಕಳೆದ ಕೆಲವು ತಿಂಗಳುಗಳಿಂದ ಶ್ರೀಲಂಕಾದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: 75ನೇ ಗಣರಾಜ್ಯೋತ್ಸವ: ರಾಜ್ಯಪಾರ ಗೆಹ್ಲೋಟ್ ರಿಂದ ಧ್ವಜಾರೋಹಣ ನೆರವೇರಿಸಿದರು!

ಇವರು ತಮಿಳು ಮಾತ್ರವಲ್ಲದೆ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲೂ ಹಲವು ಗೀತೆಗಳನ್ನು ಹಾಡಿದ್ದಾರೆ. ತಮಿಳು ರಾಷ್ಟ್ರಕವಿ ಸುಬ್ರಹ್ಮಣ್ಯ ಭಾರತಿ ಅವರ ಜೀವನ ಆಧರಿಸಿದ ‘ಭಾರತಿ’ ಚಿತ್ರದಲ್ಲಿನ ಗಾಯನಕ್ಕಾಗಿ ಭವತಾರಿಣಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಅವರ ಸಾವು ತುಂಬಲಾರದ ನಷ್ಟವಾಗಿದೆ’ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ.

RELATED ARTICLES

Related Articles

TRENDING ARTICLES