Friday, May 17, 2024

75ನೇ ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್ ಮೂಲಕ ಶುಭ ಕೋರಿದ ಗೂಗಲ್

ಬೆಂಗಳೂರು: 75ನೇ ಗಣರಾಜ್ಯೋತ್ಸವಕ್ಕೆ ವಿಶೇಷ ಡೂಡಲ್ ಮೂಲಕ ಗೂಗಲ್ ಶುಭ ಕೋರಿದೆ. 

ಹೌದು ಕ್ಷಣ ಕ್ಷಣಕ್ಕೂ ಟೆಕ್ನಾಲಜಿ ಅಭಿವೃದ್ಧಿಯಾಗುತ್ತಲೇ ದೇಶ ಪರಿವರ್ತನೆಯಾಗುತ್ತದೆ. ಇಂತಹ ಕಾಲಘಟ್ಟವನ್ನು ಗೂಗಲ್​ ವಿಶೇಷವಾಗಿ ಹಂಚಿಕೊಂದಿದ.

ಗೂಗಲ್​ ಡೂಡಲ್​ನ ಇಂದಿನ ವಿಶೇಷವೇನು..?

ಅನಲಾಗ್ ಟಿವಿಗಳ ಯುಗದಿಂದ ಸ್ಮಾರ್ಟ್‌ಫೋನ್‌ಗಳ ಬಳಕೆಯವರೆಗೆ ದೇಶ ಪರಿವರ್ತನೆಯಾದ ಕಾಲಘಟ್ಟದ ಬಗ್ಗೆ ಹಂಚಿಕೊಂಡಿದೆ. ಕಾಲ ಕಳೆದಂತೆ ಕಪ್ಪು-ಬಿಳಿಯ ಟಿವಿ ಪರದೆಗಳು ಬಣ್ಣದ ಟಿವಿಗಳಾಗಿವೆ. ಅದರ ನೋಡುಗರು ಮಾತ್ರ ಅದೇ ಹೆಮ್ಮೆಯಿಂದ ವೀಕ್ಷಿಸುತ್ತಿದ್ದಾರೆ ಎಂದು ಗೂಗಲ್ ಬರೆದುಕೊಂಡಿದೆ.

ಈ ಡೂಡಲ್ ಭಾರತದ ಗಣರಾಜ್ಯೋತ್ಸವವನ್ನು ಆಚರಿಸುತ್ತದೆ, ಇದು 1950 ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದ ದಿನವನ್ನು ನೆನಪಿಸುತ್ತದೆ ಮತ್ತು ರಾಷ್ಟ್ರವು ತನ್ನನ್ನು ತಾನು ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯವೆಂದು ಘೋಷಿಸಿದ ದಿನ’ ಎನ್ನುವ ಮಾಹಿತಿಯನ್ನು ಡೂಡಲ್‌ನಲ್ಲಿ ವಿವರಿಸಿದೆ.

ಐತಿಹಾಸಿಕ ಪರೇಡ್‌ ದೃಶ್ಯಗಳನ್ನು ತನ್ನ ಡೂಡಲ್‌ನಲ್ಲಿ ಪ್ರಕಟಿಸುವ ಮೂಲಕ ಗೂಗಲ್‌ ಗೌರವ ಸಲ್ಲಿಸಿದೆ. ವಿವಿಧ ದಶಕಗಳ ಗಣರಾಜ್ಯೋತ್ಸವ ಪರೇಡ್‌ ಅನ್ನು ನಾವು ಇದರಲ್ಲಿ ಕಾಣಬಹುದಾಗಿದೆ.

 

RELATED ARTICLES

Related Articles

TRENDING ARTICLES