ನವದೆಹಲಿ : 2024ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ರಾಜ್ಯದ ಇಬ್ಬರು ಸಾಧಕರಿಗೆ ಪ್ರದ್ಮಶ್ರೀ ಗೌರವ ಒಲಿದು ಬಂದಿದೆ.
ಜೇನು ಕುರುಬ ಹೋರಾಟಗಾರ ಮೈಸೂರಿನ ಸೋಮಣ್ಣ ಹಾಗೂ ಸುಟ್ಟ ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿ ಕಾಯಕ ಮಾಡುತ್ತಿರುವ ಪ್ರೇಮಾ ಧನರಾಜ್ ಅವರಿಗೆ ಪದ್ಮಶ್ರೀ ಗೌರವ ನೀಡಲಾಗುವುದು ಎಂದು ಘೋಷಿಸಲಾಗಿದೆ.
ಪ್ರೇಮಾ ಧನರಾಜ್ 25 ಸಾವಿರಕ್ಕೂ ಹೆಚ್ಚು ಮಂದಿಗೆ ಪ್ಲಾಸ್ಟಿಕ್ ಸರ್ಜರಿಯ ದಾಖಲೆ ಹೊಂದಿದ್ದಾರೆ. ಸೋಮಣ್ಣ ಜೇನು ಕುರುಬ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇನ್ನೂ ಅಸ್ಸಾಂನ ಪರ್ಬತಿಗೆ ಪದ್ಮಶ್ರೀ ನೀಡಲಾಗುತ್ತಿದ್ದು, ಇವರು ಮೊದಲ ಆನೆ ಮಾವುತ ಮಹಿಳೆ ಖ್ಯಾತಿ ಪಡೆದಿದ್ದಾರೆ.
34 ಸಾಧಕರಿಗೆ ಪದ್ಮಶ್ರೀ ಪ್ರಕಟ
ಈ ಬಾರಿ ದೇಶದ ವಿವಿಧೆಡೆಯ 34 ಸಾಧಕರಿಗೆ ಪದ್ಮಶ್ರೀ ಪ್ರಕಟ ಮಾಡಲಾಗಿದೆ. ಅ‘ಸಾಮಾನ್ಯ’ ಸಾಧಕರನ್ನು ಗುರುತಿಸಿ ಪದ್ಮಶ್ರೀ ಪುರಸ್ಕಾರ ಘೋಷಿಸಲಾಗಿದೆ. ಭಾರತದ 75ನೇ ಗಣರಾಜ್ಯೋತ್ಸವದ ದಿನವಾದ ನಾಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.