Tuesday, January 28, 2025

ಬೀಗರು ಮನೆಯೊಳಗೆ ಇರ್ತಾರೆ, ಪಕ್ಷಕ್ಕಲ್ಲ : ಸಚಿವ ಮಲ್ಲಿಕಾರ್ಜುನ್ ಗರಂ

ದಾವಣಗೆರೆ : ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬಗ್ಗೆ ಶೆಟ್ಟರ್ ಸಂಬಂಧಿ ಹಾಗೂ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪ್ರತಿಕ್ರಿಯೆ ನೀಡಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅವರವರ ವೈಯುಕ್ತಿಕ ಬೆಳವಣಿಗೆಗೆ ಹೋಗಿದ್ದಾರೆ‌. ಮನೆಯೊಳಗೆ ಬೀಗರು ಇರ್ತಾರೆ, ಪಕ್ಷಕ್ಕಲ್ಲ ಎಂದು ಗರಂ ಆಗಿದ್ದಾರೆ.

ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಏನು ಅಂತ ಎಫೆಕ್ಟ್ ಆಗಿರಲಿಲ್ಲ. ಈಗ ಬಿಜೆಪಿಗೆ ಹೋದಾಗಲು ನಮಗೇನೂ ಎಫೆಕ್ಟ್ ಆಗಲ್ಲ. ಎಫೆಕ್ಟ್ ಆಗುವಂತಿದ್ದರೆ ಅವರು ಯಾಕೆ ಸೋತರು..? ನಮಗೆ ಕಾರ್ಯಕರ್ತರ ಶಕ್ತಿ ಇದೆ. ಕಾಂಗ್ರೆಸ್​ಗೆ ಕಾಂಗ್ರೆಸ್ ಆದಂತ ವೋಟ್ ಇದಾವು, ಏನೂ ಎಫೆಕ್ಟ್ ಆಗಲ್ಲ ಎಂದು ಹೇಳಿದ್ದಾರೆ.

ನಾವು ಕೂಡ ರಾಮನ ಭಕ್ತರು

ರಾಮಮಂದಿರ ಪ್ರತಿಷ್ಠಾಪನೆ ವಿಚಾರ ಕುರಿತು ಮಾತನಾಡಿದ ಅವರು, ನಾವು ಕೂಡ ರಾಮನ ಭಕ್ತರು. ಅದೇ ವಿಚಾರವನ್ನೇ ಹಿಡಿದುಕೊಂಡು ಹೋಗುವುದಲ್ಲ. ಮೊದಲು ಊಟ, ವಸತಿ, ಶಿಕ್ಷಣ ಬೇಕು ಎಂದು ಬಿಜೆಪಿ ವಿರುದ್ಧ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES