Wednesday, January 22, 2025

ಇನ್ನು ನಾವು ಗ್ರೌಂಡ್​ಗೆ ಇಳಿದಿಲ್ಲ.. BJPಯಿಂದ ಎಷ್ಟು ಜನ ಬರ್ತಾರೆ ನೋಡಿ : ಪ್ರಿಯಾಂಕ್ ಖರ್ಗೆ

ಕಲಬುರಗಿ : ಹೋಗುವವರು ಹೋಗಲಿ..‌ ಬರೋರು ಬರಲಿ.. ನಮ್ಮ ಪಾರ್ಟಿ ನಿಲ್ಲಲ್ಲ.. ಯಾರೋ ಒಬ್ಬರಿಂದ ಪಾರ್ಟಿ ನಡೆಯೋದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನಾಯಕತ್ವ ಕೊರತೆಯಿದೆ. ಅದಕ್ಕಾಗೇ ಈ ರೀತಿ ಮಾಡುತ್ತಿದ್ದಾರೆ. ಇನ್ನು ನಾವು ಗ್ರೌಂಡ್​​ಗೆ ಇಳಿದಿಲ್ಲ. ಪ್ಲೇಯಿಂಗ್ ಏಲೆವನ್ ಡಿಸೈಡ್ ಆಗಿಲ್ಲ. ಆಗಲೇ ಯಾಕೆ ಇವೆಲ್ಲ ಪ್ರಶ್ನೆ..? ಇನ್ನು ಕಾದು ನೋಡಿ. ಜೆಡಿಎಸ್ ಹಾಗೂ ಬಿಜೆಪಿಯಿಂದ ಎಷ್ಟು ಜನ ಬರ್ತಾರೆ ನೋಡಿ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಕೈ ಬಲಪಡಿಸಲು ಬಿಜೆಪಿ ಸೇರ್ಪಡೆ ಎಂಬ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿ ಮೋದಿ ಕರೆನ್ಸಿ ನಡೆಯಲ್ವಾ..? ಅವರು ಜೆಡಿಎಸ್ ಜೊತೆ ಯಾಕೆ ಮೈತ್ರಿ ಮಾಡಿಕೊಂಡಿದ್ದಾರೆ..? ಸಿಂಗಲ್ ಆಗಿ ಏಲೆಕ್ಷ‌ನ್ ಮಾಡಲಿ ನೋಡೋಣ. ಬಿಜೆಪಿ ಲೀಡರ್ ಲೆಸ್ ಪಾರ್ಟಿಯಾಗಿದೆ‌. ಅಲ್ಲಿ ನಿರ್ಲಕ್ಷ ಮಾಡಿದ್ದಕ್ಕೆ ನಾವು ಸೂಕ್ತ ಸ್ಥಾನಮಾನ ನೀಡಿದ್ದೆವು. ಅವರು ಯಾಕೆ ಹೋಗಿದ್ದಾರೆ ಎಂಬ ಬಗ್ಗೆ ಕಾರಣ ನೀಡಲಿ ಎಂದು ಕುಟುಕಿದ್ದಾರೆ.

ಬಿಜೆಪಿ ನಿರ್ಲಕ್ಷ್ಯ ಮಾಡಿದ್ದಕ್ಕೆ ಟಿಕೆಟ್ ಕೊಟ್ಟಿದ್ದೆವು

ಮೋದಿ ಕೈ ಬಲಪಡಿಸೋಕೆ ಹೋಗಿದ್ದಾರೆಂದ್ರೆ ಆರು ತಿಂಗಳ ಹಿಂದೆ ಏನು ಆಗಿತ್ತು. ಅವರಿಗೆ ಏನು ಅನ್ಯಾಯ ಮಾಡಿದ್ದೇವೆ? ಬಿಜೆಪಿ ನಿರ್ಲಕ್ಷ್ಯ ಮಾಡಿದ್ದರಿಂದಲೇ ಟಿಕೆಟ್ ಕೊಟ್ಟಿದ್ದೆವು. ಸೋತ ಮೇಲೆ ಎಂಎಲ್​ಸಿ ಮಾಡಿದೆವು. ಇನ್ನೇನು ಮಾಡಬೇಕು? ರಾಜಕೀಯದಲ್ಲಿ ನಿತ್ಯ ಕಲಿಯುತ್ತಿರಬೇಕು, ಎಲ್ಲವೂ ಪಾಠಗಳೇ.. ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

RELATED ARTICLES

Related Articles

TRENDING ARTICLES