ತುಮಕೂರು : ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬಗ್ಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗ ತಾನೇ ಮಾಧ್ಯಮದಲ್ಲಿ ನೋಡಿದೆ. ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ ಹೋಗಿದ್ದಾರೆ. ಅವರು ಯೂ ಟರ್ನ್ ಹೊಡೆದಿದ್ದಾರೆ ಎಂದು ಹೇಳಿದ್ದಾರೆ.
ಶೆಟ್ಟರ್ ಅವರ ನಡೆ ನೋಡಿದಾಗ ನ್ಯೂಟನ್ ಲಾ ನೆನೆಪಿಗೆ ಬಂತು. ಶೆಟ್ಟರ್ ಸಂಭಾವಿತ ವ್ಯಕ್ತಿ, ಅವರಿಗೆ ಬಿಜೆಪಿ ಅವಮಾನ ಮಾಡಿತ್ತು. ಈಗ ಪಕ್ಷಕ್ಕೆ ಲಾಭವಾಗಬಹುದು, ಜಗದೀಶ್ ಶೆಟ್ಟರ್ನ ಯಾರೂ ನಂಬಲ್ಲ. ಮತ್ತೆ ಅಲ್ಲೆ ಇರುತ್ತಾರೆ ಅಂತ ಯಾವ ಗ್ಯಾರಂಟಿ. ಸ್ವಾರ್ಥಕೋಸ್ಕರ ಅವರು ಪಕ್ಷ ತೊರೆದಿದ್ದಾರೆ ಎಂದು ಕುಟುಕಿದ್ದಾರೆ.
ಶೆಟ್ಟರ್ ಗೌರವ ಕಡಿಮೆಯಾಗಿದೆ
ಶೆಟ್ಟರ್ ಅವರು ಅಧಿಕಾರಕ್ಕೆ ಆಸೆ ಪಡುವ ವ್ಯಕ್ತಿ ಅಲ್ಲ. ಇಲ್ಲೇ ಅವರಿಗೆ ಲೋಕಸಭಾ ಟಿಕೆಟ್ ಕೊಡೋರು. ಅವರಿಗೆ ಟಿಕೆಟ್ ಇಲ್ಲ ಅನ್ನಲ್ಲ. ಅವರು ತತ್ವ ಸಿದ್ದಾಂತದ ಆಧಾರದ ಮೇಲೆ ಪಕ್ಷ ತೊರೆದರೆ ಒಪ್ಪಿಕೊಳ್ಳೋಣ. ಬಿಜೆಪಿಯವರು ಮಾಯಾವತಿ ಅವರಿಗೆ ತೊಂದರೆ ಕೊಟ್ಟಹಾಗೆ, ಸೆಂಟ್ರಲ್ ಏಜೆನ್ಸಿಗಳನ್ನು ದುರುಪಯೋಗ ಮಾಡಿದ್ರೆ? ಆದರೆ, ಶೆಟ್ಟರ್ ವಿಚಾರದಲ್ಲಿ ಏನಾಗಿದೆ ಗೊತ್ತಿಲ್ಲ. ಶೆಟ್ಟರ್ ವಾಪಸ್ ಹೋಗಿದ್ದರಿಂದ ಅವರ ಗೌರವ ಕಡಿಮೆಯಾಗಿದೆ ಎಂದು ಸಚಿವ ರಾಜಣ್ಣ ಚಾಟಿ ಬೀಸಿದ್ದಾರೆ.