Sunday, December 22, 2024

ಜಗದೀಶ್ ಶೆಟ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ : ದಿನೇಶ್ ಗುಂಡೂರಾವ್

ಬೆಂಗಳೂರು : ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವ ನಷ್ಟವೂ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕುಟುಕಿದ್ದಾರೆ.

ಶೆಟ್ಟರ್ ಬಿಜೆಪಿ ಸೇರ್ಪಡೆ ಬಗ್ಗೆ ಟ್ವೀಟ್ ಮಾಡಿರುವ ಅವರು, ಜಗದೀಶ್ ಶೆಟ್ಟರ್‌ ಅವರಂತಹ ಸಾವಿರಾರು ನಾಯಕರನ್ನು ಸೃಷ್ಟಿಸುವ ತಾಕತ್ತು ಕಾಂಗ್ರೆಸ್‌ಗಿದೆ ಎಂದು ಚಾಟಿ ಬೀಸಿದ್ದಾರೆ.

ಜಗದೀಶ್ ಶೆಟ್ಟರ್ ಹಿರಿಯ ರಾಜಕಾರಣಿ. ಆದರೆ, ರಾಜಕೀಯ ಸಂದ್ಯಾಕಾಲದಲ್ಲಿ ತಮ್ಮನ್ನು ಅವಮಾನಿಸಿದ ಪಕ್ಷಕ್ಕೆ ಮರಳಿ ಸೇರಿಕೊಂಡಿದ್ದಾರೆ. ಈ ಮೂಲಕ ಶೆಟ್ಟರ್ ರಾಜಕೀಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದು ಛೇಡಿಸಿದ್ದಾರೆ.

ಶೆಟ್ಟರ್‌ ಆತ್ಮಗೌರವ ಕಳೆದುಕೊಂಡಿದ್ದಾರೆ

ಜಗದೀಶ್ ಶೆಟ್ಟರ್ ಬಿಜೆಪಿಯಿಂದ ಅವಮಾನಿತರಾಗಿ ರಾಜಕೀಯ ಆಶ್ರಯ ಅರಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು. ನಮ್ಮ ಪಕ್ಷ ಅವರಿಗೆ ವಿಧಾನಸಭಾ ಟಿಕೆಟ್ ನೀಡಿತ್ತು. ಚುನಾವಣೆಯಲ್ಲಿ ಸೋತರೂ ವಿಧಾನ ಪರಿಷತ್‌ಗೆ ಆಯ್ಕೆ ಮಾಡಿತ್ತು‌. ಇದಕ್ಕಿಂತ ಹೆಚ್ಚಿನ ಗೌರವ ಕೊಡಲು ಇನ್ನೇನು ಸಾಧ್ಯ? ಈಗ ಅವಮಾನ ಮಾಡಿದ ಪಕ್ಷಕ್ಕೇ‌ ಮರಳಿ ಹೋಗಿದ್ದಾರೆ‌. ಶೆಟ್ಟರ್‌ ಆತ್ಮಗೌರವ ಕಳೆದುಕೊಂಡು ಬಿಜೆಪಿಗೆ ಮರಳಿ ಹೋಗುವ ದುಸ್ಥಿತಿ ಬರಬಾರದಿತ್ತು ಎಂದು ದಿನೇಶ್ ಗುಂಡೂರಾವ್ ಅಸಮಾಧಾನ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES