Friday, December 27, 2024

ಐರ್ಲೆಂಡ್ ವಿರುದ್ಧ ಭಾರತಕ್ಕೆ 201 ರನ್​ಗಳ ದೊಡ್ಡ ಗೆಲುವು

ಬೆಂಗಳೂರು : ಅಂಡರ್​-19 ವಿಶ್ವಕಪ್​ ಟೂರ್ನಿಯ ಎರಡನೇ ಪಂದ್ಯದಲ್ಲೇ ಭಾರತದ ಯುವ ಹುಲಿಗಳು ಐರಿಷ್ ​ ಪಡೆಯನ್ನು ಬಗ್ಗು ಬಡಿದಿದ್ದಾರೆ.

ದಕ್ಷಿಣ ಆಫ್ರಿಕಾದ ಬ್ಲೂಂಫಾಂಟೈನ್​ನಲ್ಲಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ 201ರನ್​ಗಳ ಬೃಹತ್ ಗೆಲುವು ದಾಖಲಿಸಿದೆ. ಈ ಮೂಲಕ ಟೂರ್ನಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕಿರಿಯರ ತಂಡ ನಿಗದಿತ 50 ಓವರ್​ಗಳಲ್ಲಿ 301 ರನ್​ ಗಳಿಸಿತು. ಭಾರತದ ಪರ ಮುಶೀರ್ ಖಾನ್ ಭರ್ಜರಿ ಶತಕ (106) ಸಿಡಿಸಿ ಮಿಂಚಿದರು. 302 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಐರ್ಲೆಂಡ್ ಭಾರತದ ಬೌಲಿಂಗ್ ದಾಳಿಗೆ ಅಕ್ಷರಶಃ ನಲುಗಿತು.

29.4 ಓವರ್​ಗಳಲ್ಲಿ 100 ರನ್​ಗಳಿಗೆ ಆಲೌಟ್​ ಆಯಿತು. ಐರ್ಲೆಂಡ್ ಪರ ಡೇನಿಯಲ್ ಫಾರ್ಕಿನ್ ಅಜೇಯ 27 ರನ್ ಗಳಿಸಿದರು. ಆಲಿವರ್ ರೈಲೆ 15, ರಿಯಾನ್ ಹಂಟರ್ 13, ಜೋರ್ಡನ್ ನೀಲ್ 11 ರನ್ ಗಳಿಸಿದರು. ಉಳಿದ ಯಾವ ಬ್ಯಾಟರ್​ ಸಹ ಎರಡಂಕಿ ದಾಟಲಿಲ್ಲ.

ಅಂಕಪಟ್ಟಿಯಲ್ಲಿ ಭಾರತಕ್ಕೆ ಅಗ್ರಸ್ಥಾನ

ಭಾರತದ ಪರ ನಮನ್ ತಿವಾರಿ 4, ಸೌಮ್ಯ ಪಾಂಡೆ 3, ಧನುಷ್ ಗೌಡ, ಮುರುಗನ್ ಅಭಿಷೇಕ್, ನಾಯಕ ಉದಯ್ ಸಹರನ್ ತಲಾ ಒಂದು ವಿಕೆಟ್ ಪಡೆದರು. ಮುಶೀರ್ ಖಾನ್ ಪಂದ್ರಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಟೂರ್ನಿಯಲ್ಲಿ ಭಾರತ ಕಿರಿಯರ ತಂಡಕ್ಕೆ ಇದು ಸತತ ಎರಡನೇ ಗೆಲುವಾಗಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

RELATED ARTICLES

Related Articles

TRENDING ARTICLES