Sunday, December 22, 2024

ಜ.26ರಂದೇ ಯಾಕೆ ಗಣರಾಜ್ಯೋತ್ಸವ? ಧ್ವಜ ಹಾರಿಸುವಾಗ ಯಾವ ಮುನ್ನೆಚ್ಚರಿಕೆ ಅನುಸರಿಸಬೇಕು?

ಬೆಂಗಳೂರು : ರಾಷ್ಟ್ರಧ್ವಜ ಅಥವಾ ತ್ರಿವರ್ಣ ಧ್ವಜ ನಮ್ಮ ಹೆಮ್ಮೆಯ ಸಂಕೇತ. ಇದು ನಮ್ಮ ರಾಷ್ಟ್ರೀಯತೆಯನ್ನು ಪ್ರತಿನಿಧಿಸುತ್ತದೆ. ದೇಶದ ರಾಷ್ಟ್ರಪತಿಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (ಕೆಂಪು ಕೋಟೆ ಮೇಲೆ) ರಾಷ್ಟ್ರಧ್ವಜ ಹಾರಿಸಿದಾಗ ನಾನು ‘ಭಾರತೀಯ’ ಎಂಬ ಭಾವನೆ ಮೂಡುತ್ತದೆ.

ನಾಳೆ 75ನೇ ಗಣರಾಜ್ಯೋತ್ಸವ (ಜನವರಿ 26). ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ಮಾಡುವುದಿಲ್ಲ. ಬದಲಿಗೆ, ಈ ಗೌರವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲುತ್ತದೆ.

ಪ್ರತಿಯೊಬ್ಬ ವ್ಯಕ್ತಿಯೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದನ್ನು ಕಡ್ಡಾಯ. ಹೀಗಾಗಿ, ರಾಷ್ಟ್ರಧ್ವಜ ಸಂಹಿತೆ ಜಾರಿಗೊಳಿಸಲಾಗಿದೆ. ಹಾಗಿದ್ರೆ, ರಾಷ್ಟ್ರಧ್ವಜ ಗೌರವಕ್ಕೆ ನಾವು ಯಾವ ಮುನ್ನೆಚ್ಚರಿಕೆ ಅನುಸರಿಸಬೇಕು? ಇಲ್ಲಿದೆ ನೋಡಿ ಮಾಹಿತಿ.

  • ಧ್ವಜಾರೋಹಣ ಮಾಡುವಾಗ ಮೇಲೆ ಕೇಸರಿ ಬಣ್ಣ ಬರುವಂತೆ ನೋಡಿಕೊಳ್ಳಬೇಕು.
  • ಪ್ರತಿ ಧ್ವಜವು 3:2 ಅಳತೆಯ ಅನುಪಾತವನ್ನು ಹೊಂದಿರಬೇಕು.
  • ಕೇಸರಿ-ಬಿಳಿ-ಹಸಿರು ಬಣ್ಣಗಳ ನಡುವೆ 24 ಗೆರೆಗಳನ್ನು ಹೊಂದಿದ ಅಶೋಕ ಚಕ್ರವಿರಬೇಕು.
  • ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ನೇತು ಹಾಕಬಾರದು.
  • ಧ್ವಜದ ಮೇಲೆ ಏನನ್ನೂ ಬರೆಯಬಾರದು.
  • ವಸ್ತುಗಳು, ಕಟ್ಟಡಗಳು ಇತ್ಯಾದಿಗಳನ್ನು ಮುಚ್ಚಲು ರಾಷ್ಟ್ರಧ್ವಜವನ್ನು ಬಳಸಬಾರದು.
  • ಧ್ವಜವನ್ನು ಕಂಬದ ತುದಿಯಲ್ಲಿ ಹಾರಿಸಬೇಕು.
  • ಧ್ವಜವನ್ನು ಕೆಳಗೆ ಬೀಳದಂತೆ ಎಚ್ಚರಿಕೆ ವಹಿಸಬೇಕು.
  • ಧ್ವಜ ಹಾರಿಸುವಾಗ ವೇಗವಾಗಿ ಹಾಗೂ ಇಳಿಸುವಾಗ ನಿಧಾನದ ಕ್ರಮಗಳನ್ನು ಅನುಸರಿಸಬೇಕು.
  • ಧ್ವಜ ಸಂಹಿತೆ ಉಲ್ಲಂಘನೆಗೆ 3 ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ.

.26 ರಂದೇ ಯಾಕೆ ಗಣರಾಜ್ಯೋತ್ಸವ?

ಭಾರತೀಯ ಸಂವಿಧಾನವನ್ನು ರಚಿಸಲು ಡಾ.ಬಿ.ಆರ್ ಅಂಬೇಡ್ಕರ್ ನೇತೃತ್ವದ ಕರಡು ಸಮಿತಿಯು 2 ವರ್ಷ 11 ತಿಂಗಳು 18 ದಿನ ತೆಗೆದುಕೊಂಡಿತು. 1949 ನವೆಂಬರ್ 26 ರಂದೇ ಸಂವಿಧಾನವನ್ನು ಅಂಗೀಕರಿಸಿದರೂ ಎರಡು ತಿಂಗಳ ನಂತರ 1950 ಜನವರಿ 26 ರಂದು ಗಾಂಧೀಜಿ ನೇತೃತ್ವದಲ್ಲಿ ಐಎನ್​ಸಿ (INC) ‘ಪೂರ್ಣ ಸ್ವರಾಜ್’ ಘೋಷಿಸಿದ್ದರ ಸವಿ ನೆನಪಿಗಾಗಿ ಜನವರಿ 26 ರಂದೇ ‘ಗಣರಾಜ್ಯೋತ್ಸವ’ ಆಚರಣೆಗೆ ನಿರ್ಧರಿಸಲಾಯಿತು.

RELATED ARTICLES

Related Articles

TRENDING ARTICLES