Friday, January 10, 2025

ನಾನು ಕಾಂಗ್ರೆಸ್​ ಸೇರಲ್ಲ ಮಂಡ್ಯ ಬಿಡಲ್ಲ: ಸಂಸದೆ ಸುಮಲತಾ 

ಬೆಂಗಳೂರು: ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಸೇರಲ್ಲ ಮಂಡ್ಯ ಬಿಡಲ್ಲ ಎಂದು ಸಂಸದೆ ಸುಮಲತಾ ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವ್ರು ಎರಡು ದಿನಗಳ ಹಿಂದೆ ನನ್ನ ಜೊತೆ ಮಾತನಾಡಿ ಪಕ್ಷಕ್ಕೆ ಅಹ್ವಾನ ನೀಡಿದ್ದರು.ಅದರೆ ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಪಕ್ಷ ಸೇರುವುದಿಲ್ಲ ಎಂದರು.

ಬಿಜೆಪಿ ಸ್ಥಳೀಯ ನಾಯಕರು ಯಾವ ನಿಲುವು ತಗೆದುಕೊಳ್ಳಬೇಕು ಎಂಬ ಕುರಿತು ಚರ್ಚೆ ಮಾಡಿದ್ದೇವೆ. ಮೈತ್ರಿಯಾಗಿದ್ರೂ ಸಿಟ್ಟಿಂಗ್ ಎಂಪಿಗೆ ಟಿಕೆಟ್ ಕೊಡುವ ಪದ್ದತಿಯಿದೆ. ಅವರು ಗೆದ್ದಿರೋ ಕ್ಷೇತ್ರದಲ್ಲೂಅಷ್ಟೇ
ಹೀಗಾಗಿ ಬಿಜೆಪಿಯನ್ನು ಮಂಡ್ಯದಲ್ಲಿ ಉಳಿಯಬೇಕು ಎಂದರು.

ಎಂಪಿ ಸೀಟು ಉಳಿಸಿಕೊಂಡರೇ ಗೆದ್ದೆ ಗೆಲ್ಲುತ್ತೆವೆ ಉಹಾಪೋಹ ಬಿಟ್ಟರೆ ಸೀಟು ಬಿಟ್ಟುಕೊಡುವ ವಿಚಾರ ಯಾರಿಗೂ ಬಂದಿಲ್ಲ.ದೊಡ್ಡ ದೊಡ್ಡ ನಿರ್ಧಾರ, ಮೈತ್ರಿ ಹೇಗೆ ಮುಂದುವರಿಸಿಕೊಳ್ಳಬೇಕು ಅನ್ನೊದು ಅವರಿಗೆ ಬಿಟ್ಟಿದ್ದು ಎಂದರು.

ನಾನು ನನ್ನ ಕ್ಷೇತ್ರದ ಕಡೆ ಹೆಚ್ಚಿನ ಗಮನ ಕೊಟ್ಟು ಸಾಕಷ್ಟು ಕೆಲಸ ಮಾಡಿದ್ದೇನೆ.ನನ್ನ ಬಗ್ಗೆ ಕಪ್ಪುಚುಕ್ಕೆ ಇಲ್ಲ. ಹಲವು ಅಭಿವೃದ್ಧಿ ಕಾರ್ಯ,ಸಭೆ ಎಲ್ಲವನ್ನು ಮಾಡಿದ್ದೇನೆ ನನಗೆ ,ಬಿಜೆಪಿನೇ ಸೀಟು ಉಳಿಸಿಕೊಳ್ಳುತ್ತೆ ಅನ್ನೊ ನಂಬಿಕೆಯಿದೆ ಎಂದರು.

 

RELATED ARTICLES

Related Articles

TRENDING ARTICLES