Monday, December 23, 2024

6,6,6.. 47 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್

ಬೆಂಗಳೂರು : ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತದ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಆಕ್ರಮಣಕಾರಿ ಆಟವಾಡುತ್ತಿದ್ದಾರೆ.

ನಾಯಕ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್​ ಆರಂಭಿಸಿದ ಯಶಸ್ವಿ ಜೈಸ್ವಾಲ್ ಕೇವಲ 47 ಎಸೆತಗಳಲ್ಲೇ 7 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್​ಗಳೊಂದಿಗೆ ಅರ್ಧಶತಕ (50) ಪೂರೈಸಿದರು.

ಇಂಗ್ಲೆಂಡ್ ಪರ ಚೊಚ್ಚಲ ಟೆಸ್ಟ್​ ಪಂದ್ಯವಾಡುತ್ತಿರುವ ವೇಗಿ ಟಾಮ್ ಹಾರ್ಟ್ಲಿ ಎಸೆದ ಮೊದಲ ಓವರ್​ನಲ್ಲೇ ಜೈಸ್ವಾಲ್ ಬೆಂಡೆತ್ತಿದರು. ಆ ಓವರ್​ನಲ್ಲಿ ಎರಡು ಸಿಕ್ಸರ್ ಸಿಡಿಸಿ, ಘರ್ಜಿಸಿದರು. ಜೈಸ್ವಾಲ್ ಆರ್ಭಟಕ್ಕೆ ಹಾರ್ಟ್ಲಿ ಕೇವಲ 5 ಓವರ್​ಗಳಲ್ಲಿ 44 ರನ್​ ಬಿಟ್ಟುಕೊಟ್ಟಿದ್ದು ಗಮನಾರ್ಹ.

ನಿರಾಸೆ ಮೂಡಿಸಿದ ರೋಹಿತ್

ಜೈಸ್ವಾಲ್ ಹಾಗೂ ರೋಹಿತ್ ಜೋಡಿ ಮೊದಲ ವಿಕೆಟ್​ಗೆ 80 ರನ್​ಗಳ ಜೊತೆಯಾಟ ನೀಡಿತು. ಆದರೆ, ನಾಯಕ ರೋಹಿತ್ ಶರ್ಮಾ ನಿರಾಸೆ ಮೂಡಿಸಿದರು. 27 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 24 ರನ್​ ಗಳಿಸಿ ಔಟಾದರು. ಆಕ್ರಮಣಕಾರಿಯಾಗಿ ಆಟವಾಡುತ್ತಿದ್ದ ಜೈಸ್ವಾಲ್​ಗೆ ರೋಹಿತ್ ಸಾಥ್​ ನೀಡಬೇಕಿತ್ತು.

ರೋಹಿತ್ ನಿರ್ಗಮನದ ಬಳಿಕ ಶುಭ್​ಮನ್ ಗಿಲ್ ಕ್ರೀಸ್​ಗೆ ಬಂದಿದ್ದಾರೆ. ಪ್ರಸ್ತುತ ಭಾರತ 23 ಓವರ್​ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 119 ರನ್​ ಗಳಿಸಿದೆ. ಯಶಸ್ವಿ ಜೈಸ್ವಾಲ್ ಅಜೇಯ 76* (3 ಸಿಕ್ಸರ್ ಹಾಗೂ 9 ಬೌಂಡರಿ) ಹಾಗೂ ಶುಭ್​ಮನ್ ಗಿಲ್ ಅಜೇಯ 14* ರನ್​ ಗಳಿಸಿ ಆಡುತ್ತಿದ್ದಾರೆ.

RELATED ARTICLES

Related Articles

TRENDING ARTICLES