Friday, December 27, 2024

‘ಕಾಟೇರ’ ದರ್ಶನ್​ರಿಂದ ‘ಉಪಾಧ್ಯಕ್ಷ’ನಿಗೆ ಶಾಕಿಂಗ್ ಗಿಫ್ಟ್

ಬೆಂಗಳೂರು : ‘ಕಾಟೇರ’ ಸಕ್ಸಸ್​ನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟ ಚಿಕ್ಕಣ್ಣರಿಗೆ ಶಾಕಿಂಗ್ ಗಿಫ್ಟ್​ ನೀಡಿದ್ದಾರೆ.

ಚಿಕ್ಕಣ್ಣ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ ‘ಉಪಾಧ್ಯಕ್ಷ’ ಸಿನಿಮಾ ಬಿಡುಗಡೆ ಹಿನ್ನೆಲೆ ಸ್ವತಃ ದರ್ಶನ್ ಅವರೇ 60 ಅಡಿ ಎತ್ತರದ ಕಟೌಟ್​ ಮಾಡಿಸಿದ್ದಾರೆ.

ಚಿತ್ರ ರಿಲೀಸ್ ವೇಳೆ ಚಿತ್ರತಂಡ ಕಟೌಟ್ ಮಾಡಿಸುವುದು ಸಾಮಾನ್ಯ. ಅದರೆ, ನಟ ದರ್ಶನ್ ಕಟೌಟ್​ ಮಾಡಿಸಿರುವ ವಿಚಾರವನ್ನು ಸೀಕ್ರೆಟ್ ಆಗಿಯೇ ಇಟ್ಟಿದ್ದರು. ಇದು ಉಪಾಧ್ಯಕ್ಷ ಚಿಕ್ಕಣ್ಣರಿಗೆ ತಿಳಿದಿದ್ದು, ಅಚ್ಚರಿಯಾಗಿದ್ದಾರೆ.

ಆನಂದ್​ ಆರ್ಟ್ಸ್​ ತಂಡದವರು 60 ಅಡಿ ಕಟೌಟ್​ ಸಿದ್ಧಪಡಿಸುತ್ತಿದ್ದು, ನಾಳೆ ಚಿತ್ರ ಪ್ರದರ್ಶನಗೊಳ್ಳುವ ಗಾಂಧಿನಗರದ ಮುಖ್ಯ ಚಿತ್ರಮಂದಿರದ ಮುಂದೆ ತಲೆ ಎತ್ತಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಟ ಚಿಕ್ಕಣ್ಣ, ನಿಜಕ್ಕೂ ಈ ವಿಷಯ ತಿಳಿದು ಅಚ್ಚರಿ ಆಗಿದೆ. ನನ್ನ ಸ್ವಂತ ಅಣ್ಣ ಇದ್ದರೂ ಈ ರೀತಿ ಪ್ರೀತಿ ತೋರಿಸುತ್ತಿರಲಿಲ್ಲ ಅನಿಸುತ್ತದೆ. ಡಿ ಬಾಸ್​ಗೆ ಧನ್ಯವಾದ ಎಂದು ಹೇಳಿದ್ದಾರೆ.

ನಾಳೆ ‘ಉಪಾಧ್ಯಕ್ಷ’ಗ್ರ್ಯಾಂಡ್​ ರಿಲೀಸ್

ಕಾಮಿಡಿ ಮೂಲಕ ಪ್ರೆಕ್ಷಕರ ಮನ ಗೆದ್ದ ಚಿಕ್ಕಣ್ಣ ನಾಯಕನಾಗಿ ಅಭಿನಯಿಸಿರುವ ಉಪಾಧ್ಯಕ್ಷ ಸಿನಿಮಾ ಶುಕ್ರವಾರ (ನಾಳೆ) ರಾಜ್ಯಾದ್ಯಂತ ರಿಲೀಸ್​ ಆಗಲಿದೆ. ಉಮಾಪತಿ ಶ್ರೀನಿವಾಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಚಿಕ್ಕಣ್ಣ ಜೊತೆಗೆ ಮಲೈಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES