Sunday, December 22, 2024

ಶೆಟ್ಟರ್ ಬಿಜೆಪಿ ಸೇರ್ಪಡೆ ಸುದ್ದಿ ಕೇಳಿ ಶಾಕ್ ಆದ ಶಶಿಕಲಾ ಜೊಲ್ಲೆ

ಬೆಳಗಾವಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಸೇರ್ಪಡೆಯಾದ ವಿಷಯ ಕೇಳಿ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಶಾಕ್​ ಆಗಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಕಾ ಆಗಿದ್ದಾರಾ..? ಎಂದು ಮಾಧ್ಯಮದವರಿಂದ ಕೇಳಿ ಖುಷಿಯಾಗಿದ್ದಾರೆ.

ಜಗದೀಶ್ ಶೆಟ್ಟರ್ ದೆಹಲಿಯಲ್ಲಿ ಬಿಜೆಪಿ ಪಕ್ಷ ಪ್ರವೇಶ ಮಾಡಿದ್ದು ಮಾಧ್ಯಮಗಳಿಂದ ಗೊತ್ತಾಗಿದೆ. ವಿಷಯ ಕೇಳಿ ಖುಷಿಯಾಗಿದೆ. ಮನೆ ಬಿಟ್ಟು ಹೊರಗೆ ಹೋದ ಮೇಲೆ ತೊಂದರೆಗಳು ಏನಾಗುತ್ತವೆ ಎಂದು ಗೊತ್ತಾಗುತ್ತವೆ. ಮರಳಿ ಮನೆಗೆ ಬಂದಿದ್ದು ಸಂತಸ ತಂದಿದೆ ಎಂದು ಹೇಳಿದ್ದಾರೆ.

ಸವದಿ ಬರುವದನ್ನ ಕಾದುನೋಡಬೇಕು

ಜಗದೀಶ್ ಶೆಟ್ಟರ್ ವಾಪಸಾತಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಒಳ್ಳೆಯದಾಗುತ್ತದೆ. ಶಾಸಕ ಲಕ್ಷ್ಮಣ ಸವದಿ ಬರುವದನ್ನ ಕಾಯ್ದು ನೋಡಬೇಕು. ಒಬ್ಬರು ಹಿರಿಯರು ಹೊರಗಡೆ ಹೋಗಿ ಒಳಗಡೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಲಕ್ಷ್ಮಣ ಸವದಿ ಪಕ್ಷ ಸೇರುವದನ್ನ ಕಾಯ್ದು ನೋಡಬೇಕು ಎಂದು ಶಾಸಕಿ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES