Friday, December 27, 2024

ಕ್ರೀಡಾಂಗಣಕ್ಕೆ ನುಗ್ಗಿ ರೋಹಿತ್ ಕಾಲಿಗೆ ಬಿದ್ದ ವಿರಾಟ್ ಅಭಿಮಾನಿ

ಬೆಂಗಳೂರು : ಭಾರತ ಹಾಗೂ ಇಂಗ್ಲೆಂಡ್ ನಡುವೆ ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಕುತೂಹಲಕಾರಿ ಘಟನೆಯೊಂದು ನಡೆಯಿತು.

ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಮಾಡುತ್ತಿರುವಾಗ ವಿರಾಟ್ ಕೊಹ್ಲಿ ಅವರ ಜೆರ್ಸಿ ಧರಿಸಿದ್ದ ಅಭಿಮಾನಿಯೊಬ್ಬ ಏಕಾಏಕಿ ಮೈದಾನದಕ್ಕೆ ನುಗ್ಗಿದ್ದಾನೆ.

ಈ ವೇಳೆ ನೇರವಾಗಿ ಕ್ರೀಸ್​ನಲ್ಲಿದ್ದ ರೋಹಿತ್​ ಶರ್ಮಾ ಬಳಿ ಹೋಗಿ ಕಾಲುಗಳಿಗೆ ಎರಗಿದ್ದಾನೆ. ಅಷ್ಟರಲ್ಲಿ ಭದ್ರತಾ ಸಿಬ್ಬಂದಿ ಕ್ರೀಡಾಂಗಣಕ್ಕೆ ಬಂದು ಅಭಿಮಾನಿಯನ್ನು ಹಿಡಿದು ಹೊರಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

246 ರನ್​ಗಳಿಗೆ ಇಂಗ್ಲೆಂಡ್​ ಆಲೌಟ್

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್​ 246 ರನ್​ಗಳಿಗೆ ಆಲೌಟ್​ ಆಗಿದೆ. ಇಂಗ್ಲೆಂಡ್​ ತಂಡದ ನಾಯಕ ಬೆನ್ ಸ್ಟೋಕ್ಸ್​ 70 ರನ್​ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಉಳಿದಂತೆ ಬೈರ್​ ಸ್ಟೋ 37, ಡಕೆಟ್ 35, ಜೋ ರೂಟ್ 29 ರನ್​ ಗಳಿಸಿದರು. ಭಾರತದ ಪರ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 3 ವಿಕೆಟ್, ಅಕ್ಸರ್ ಪಟೇಲ್ ಹಾಗೂ ಬುಮ್ರಾ ತಲಾ 2 ವಿಕೆಟ್ ಪಡೆದು ಮಿಂಚಿದರು.

RELATED ARTICLES

Related Articles

TRENDING ARTICLES