Thursday, January 23, 2025

‘ಪಿಂಕ್ ವಾಟ್ಸ್ ಆ್ಯಪ್’ ಬಳಕೆದಾರರೇ ಎಚ್ಚರ: ನೀವು ಈ ಆ್ಯಪ್ ಡೌನ್‌ಲೋಡ್‌ ಮಾಡಿದ್ರೆ ಈಗಲೇ ಡಿಲೀಟ್ ಮಾಡಿ  

ಬೆಂಗಳೂರು: ನಿಮ್ಮ ಮೊಬೈಲ್​ನಲ್ಲಿ’ಪಿಂಕ್ ವಾಟ್ಸ್ ಆ್ಯಪ್’ ಇದ್ದರೆ ಈಗಲೇ ಈಗಲೇ ಡಿಲೇಟ್ ಮಾಡಿ ಬಿಡಿ ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ.

ಹೌದು, ಪಿಕ್‌ ಕಲರ್​ನ ಯಾವುದೇ ವಸ್ತಗಳು ನಮ್ಮನ್ನು ತನ್ನತ್ತ ಸೆಳೆದೆಬಿಡುತ್ತವೆ. ಹಾಗೆಯೇ ಇದೀಗ ಪಿಂಕ್‌ ವ್ಯಾಟ್ಸಪ್‌ ಬಂದಿದ್ದು, ಇದನ್ನು ಬಳಕೆ ಮಾಡುವವರು ಅಪಾಯಕ್ಕೆ ಸಿಲುಕುತ್ತಾರೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಹಾಗಾದರೆ ಈ ಬಗ್ಗೆ ಕರ್ನಾಟಕ ರಾಜ್ಯದ ಪೊಲೀಸ್‌ ಇಲಾಖೆ ಹೇಳಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿದೆ ಮುಂದೆ ಓದಿ

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರಾಜ್ಯ ಪೊಲೀಸ್, ‘ಗುಲಾಬಿ ಬಣ್ಣದ ವಾಟ್ಸ್ ಆಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ, ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ಆ್ಯಪ್  ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ..’ ಎಂದು ಸಂದೇಶ ನೀಡಿದೆ.

ಇದನ್ನೂ ಓದಿ: ಕಾಂಗ್ರೆಸ್ಸಿಗರು ಬಾಬರ್ ಸಂತತಿಯನ್ನು ಪ್ರೀತಿಸಿದಷ್ಟು ಅವರಪ್ಪಂದಿರನ್ನು ಪ್ರೀತಿಸಿರಲ್ಲ!: ಸಿ.ಟಿ ರವಿ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕವೇ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ನಡೆಯುತ್ತಿದ್ದು, ಪ್ರತಿದಿನ ಹಲವರು ವಂಚನೆಗೆ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ಒಂದು ವೇಳೆ ನೀವು ಗುಲಾಬಿ ವಾಟ್ಸ್ ಆ್ಯಪ್‌ ಅನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿದರೆ ಫೋನ್‌ನಲ್ಲಿರುವ ಫೋಟೊ, ಸೇವ್ ಆಗಿರುವ ಫೋನ್ ನಂಬರ್‌ಗಳು. ನೆಟ್ ಬ್ಯಾಂಕಿಂಗ್ ಪಾಸ್‌ವರ್ಡ್, ಎಸ್‌ಎಂಎಸ್ ಹ್ಯಾಕ್ ಆಗಲಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

 

RELATED ARTICLES

Related Articles

TRENDING ARTICLES