Monday, January 6, 2025

ಶಿಕ್ಷಕಿ ದೀಪಿಕಾ ಕೊಲೆ ಪ್ರಕರಣ : ಆರೋಪಿ ನಿತೇಶ್‌​ ಅರೆಸ್ಟ್ 

ಮಂಡ್ಯ: ಡಿವೈಎಸ್​​ಪಿ ಮುರಳಿ ನೇತೃತ್ವದಲ್ಲಿ ಮೇಲುಕೋಟೆಯಲ್ಲಿ ನಡೆದ  ಶಿಕ್ಷಕಿ ದಿಪೀಕಾ ಕೊಲೆಯನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ನಿತೀಶ್ ​​(21)ಅನ್ನು ಬಂಧಿಸಲಾಗಿದೆ.

ತನಿಖೆ ವಿಚಾರಣೆ ವೇಳೆ ದೀಪಿಕಾರನ್ನು ಪ್ಲ್ಯಾನ್​ ಮಾಡಿಯೇ ಕೊಲೆ ಮಾಡಿರುವುದು ತಿಳಿದುಬಂದಿದೆ. ಕೊಲೆಗೂ ಮುನ್ನ ನಿತೀಶ್ ಗುಂಡಿ ತೆಗೆದಿದ್ದನು. ನಂತರ ದೀಪಿಕಾರನ್ನು ಮೇಲುಕೋಟೆ ಬೆಟ್ಟದ ತಪ್ಪಲಿನಲ್ಲಿ ಅಡ್ಡಗಟ್ಟಿ ಕೊಲೆ ಮಾಡಿ ಹೂತು ಹಾಕಿದ್ದನು ಎಂದು ತಿಳಿದುಬಂದಿದೆ.

ಹೊಸಪೇಟೆಯಲ್ಲಿ ಆರೋಪಿ ಪತ್ತೆ

ದೀಪಿಕಾರನ್ನು ಕೊಲೆಗೈದ ನಂತರ ಎರಡು ದಿನಗಳ ನಿತೇಶ್ ಗ್ರಾಮದಲ್ಲೇ ಇದ್ದನು. ಯಾವಾಗ ದೀಪಿಕಾಳ ಶವ ಪತ್ತೆಯಾಯ್ತೋ ಅಂದಿನಿಂದ ನಾಪತ್ತೆಯಾಗಿದ್ದನು. ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿ ನಿತೇಶ್​ನನ್ನು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಂಧಿಸಿದ್ದಾರೆ. ಸದ್ಯ, ಆರೋಪಿಯನ್ನು ಮೇಲುಕೋಟೆ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದ್ದು, ಕೊಲೆ ಮಾಡಿರುವುದು ತಾನೇ ಎಂದು ಒಪ್ಪಿಕೊಂಡಿದ್ದಾನೆ.

ಪ್ರಕರಣದ ದಿಕ್ಕು ತಪ್ಪಿಸಲು ನಾಟಕವಾಡ್ಡಿದ್ದ ಆರೋಪಿ ನಿತೇಶ್, ಕೊಲೆಯಾದ ಮಾರನೇ ದಿನ ದೀಪಿಕಾಳ ತಂದೆಗೆ ತಾನೇ ಕರೆ ಮಾಡಿದ್ದನು.  ಅಪ್ಪಾಜಿ ದೀಪಿಕಾ ಅಕ್ಕಾ ಸಿಕ್ಕಿದ್ರಾ ಎಂದು ವಿಚಾರಿಸಿದ್ದನು. ಆ ಮೂಲಕ ತನ್ನ ಮೇಲೆ ಅನುಮಾನ ಬಾರದಂತೆ ನಿತೇಶ್ ನಾಟಕವಾಡಿದ್ದನು.

ಘಟನೆಯ ವಿವರ:

ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ನಿವಾಸಿಯಾಗಿದ್ದ ದೀಪಿಕಾ ಅವರು ಜನವರಿ 20 ರಂದು ಎಂದಿನಂತೆ ಶಾಲೆಗೆ ಹೋಗಿದ್ದರು. ಆದರೆ, ಮನೆಗೆ ವಾಪಸ್ ಆಗಿರಲಿಲ್ಲ. ಹೀಗಾಗಿ ತನ್ನ ಪತ್ನಿ ನಾಪತ್ತೆಯಾಗಿರುವುದಾಗಿ ಪತಿ ಲೋಕೇಶ್​​​ ದೂರು ನೀಡಿದ್ದರು.

 ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದರು

ದೀಪಿಕಾಳಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾಗ ಮೇಲಕೋಟೆ ಬೆಟ್ಟದ ತಪ್ಪಲಿನಲ್ಲಿ ಆಕೆಯ ಡಿಯೋ ಸ್ಕೂಟರ್ ಪತ್ತೆಯಾಗಿತ್ತು. ಈ ಪ್ರದೇಶದ ಸುತ್ತಮುತ್ತ ತೀವ್ರ ಹುಡುಕಾಟ ನಡೆಸಿದಾಗ ಹೂತಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಆರೋಪಿ ಸುಳಿವು ಕೊಟ್ಟ 13 ಸೆಕೆಂಡ್‌ಗಳ ವಿಡಿಯೋ

ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ತಹಶೀಲ್ದಾರ್, ಮೃತದೇಹದ ಹೊರತೆಗೆದಾಗ, ಶವ ದೀಪಿಕಾಳದ್ದಾಗಿತ್ತು. ಶವ ಪತ್ತೆಯಾಗುತ್ತಿದ್ದಂತೆ ನಿತೀಶ್ ಗ್ರಾಮದಿಂದ ಪರಾರಿಯಾಗಿದ್ದು, ದೀಪಿಕಾಳ ಪತಿ ಲೋಕೇಶ್, ನಿತೀಶ್ ಮೇಲೆ ಶಂಕೆ ವ್ಯಕ್ತಪಸಿಡಿದ್ದರು. ಅಲ್ಲದೆ ದೀಪಿಕಾಳನ್ನ ಯುವಕನೊಬ್ಬ ಎಳೆದಾಡುತ್ತಿದ್ದ ದೃಶ್ಯವನ್ನ ಬೆಟ್ಟದ ಮೇಲಿಂದ ಪ್ರವಾಸಿಗೊಬ್ಬರು ವಿಡಿಯೋ ಮಾಡಿದ್ದರು. ಇದನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು.

RELATED ARTICLES

Related Articles

TRENDING ARTICLES