Thursday, December 26, 2024

ಟಿಪ್ಪು ಗೋವಿಂದ.. ಈಗ ಗಟ್ಟಿ ಉಳಿಯೋದು ರಾಮನೇ : ಆರ್. ಆಶೋಕ್

ಬೆಂಗಳೂರು : ಟಿಪ್ಪು ಗೋವಿಂದ.. ಇವಾಗ ಗಟ್ಟಿ ಉಳಿಯುವುದು ರಾಮನೇ ಅಂತ ಸಿಎಂ ಸಿದ್ದರಾಮಯ್ಯರಿಗೆ ಅರ್ಥವಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕುಟುಕಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಷ್ಟು ದಿನ ಜೈ ಟಿಪ್ಪು ಸುಲ್ತಾನ್ ಎಂದವರ ಬಾಯಲ್ಲಿ ಜೈ ಶ್ರೀರಾಮ್ ಅಂತ ಘೋಷಣೆ ಬಂದಿದೆ. ಇದು ಆಶ್ಚರ್ಯ ಹಾಗೂ ಅದ್ಭುತ ಎಂದು ಚಾಟಿ ಬೀಸಿದರು.

ಲೋಕಸಭೆಯಲ್ಲಿ ಒಂದು ಸೀಟು ಉಳಿಸಲು ರಾಮನಿಗೆ ಜೈ ಅನ್ತಿದ್ದಾರೆ. ಟಿಪ್ಪುವನ್ನು ಎಲ್ಲಿ ಬಿಟ್ಟಿರಿ, ಟಿಪ್ಪು ಕಥೆ ಏನಾಗಬೇಕು. ಟಿಪ್ಪು ಗೋವಿಂದ ಇವಾಗ ಗಟ್ಟಿ ಉಳಿಯುವುದು ರಾಮನೇ‌ಎಂದು ಸಿದ್ದರಾಮಯ್ಯಗೆ ಅರ್ಥವಾಗಿದೆ. ಇವಾಗ ಅಯೋಧ್ಯೆ ರಾಮಮಂದಿರಕ್ಕೆ ಹೋಗ್ತೀನಿ ಅಂತಿದ್ದಾರೆ ಎಂದು ಛೇಡಿಸಿದರು.

ಹಿಂದೆ ಇದೊಂದು ವಿವಾದಿತ ಸ್ಥಳ, ಅಲ್ಲಿಗೆ ಹೋಗಲ್ಲ ಎಂದಿದ್ದರು. ನ್ಯಾಯಾಲಯದ ಆದೇಶ ಆಗಿದ್ದರೂ ಅದು ವಿವಾದಿತ ಸ್ಥಳ ಎಂದಿದ್ದರು. ಇವಾಗ ದೇಶದಲ್ಲಿ ರಾಮ ರಾಮ ಎಂದು ಜನ ಪರಿವರ್ತನೆ ಆದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಕೂಡಾ ಪರಿವರ್ತನೆ ಆಗಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯ ಒತ್ತಡದಿಂದ ಅವರು ಬದಲಾಗಿದ್ದಾರೆ ಎಂದು ಹೇಳಿದರು.

ಗಾಂಧಿ ರಾಮ ಬೇರೆ, ಬಿಜೆಪಿ ರಾಮ ಬೇರೆನಾ?

ಕೋರ್ಟ್ ನಲ್ಲಿ ರಾಮ ಎಂಬುದು ಕಾಲ್ಪನಿಕ ಎಂದು ಪ್ರಮಾಣ ಪತ್ರ ಸಲ್ಲಿಸಿದ್ದರು. ಇವಾಗ ನನ್ನ ಹೆಸರಿನಲ್ಲಿ ರಾಮ, ಶಿವ ಇದ್ದಾರೆ ಎನ್ನುತ್ತಾರೆ. ರಾಮನೇ ಇಲ್ಲ ಎಂದವರು, ರಾಮನಿಗೆ ಬರ್ತ್ ಸರ್ಟಿಫಿಕೇಟ್ ಕೇಳಿದವರು ಇವಾಗ ಹೆಂಗೆ ಕೊಡ್ತಿದ್ದಾರೆ. ಗಾಂಧಿ ರಾಮ ಬೇರೆ, ಬಿಜೆಪಿ ರಾಮ ಬೇರೆ ಎನ್ನುತ್ತಾರೆ. ಆದರೆ, ಹಳ್ಳಿ ಹಳ್ಳಿಗೂ ಹೋದರೂ ರಾಮಾಯಣ, ಮಹಾಭಾರತದ ಲಕ್ಷಾಂತರ ಸುಳಿವು ಸಿಗುತ್ತದೆ. ಇವಾಗ ಎರಡು ರಾಮನನ್ನು ಸೃಷ್ಟಿ ಮಾಡಲು ಹೊರಟಿದ್ದಾರೆ. ಇದು ಸಿದ್ದರಾಮಯ್ಯ ವಿಶೇಷತೆ. ಲಿಂಗಾಯತ ಧರ್ಮದಲ್ಲಿ ಎರಡು ಮಾಡಲು ಹೊರಟಿದ್ದರು ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES