Wednesday, January 22, 2025

ಬಿಜೆಪಿ ನಾಯಕರು ಅಯೋಗ್ಯರು : ಪ್ರಿಯಾಂಕ್ ಖರ್ಗೆ

ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಏಕೆ ಬರ್ತಾರೆ ಅನ್ನೋದೇ ಅವರ ಪಕ್ಷದ ಅಯೋಗ್ಯರಿಗೆ ಗೊತ್ತಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರ ಮೇಲೆ ಸಚಿವ ಪ್ರಿಯಾಂಕ್‌ ಖರ್ಗೆ ಹರಿಹಾಯ್ದಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರನ್ನು ಅಯೋಗ್ಯರಿಗೆ ಹೋಲಿಕೆ ಮಾಡಿದ್ದಾರೆ. ರಾಜ್ಯ ಬಿಜೆಪಿಯವರು ಮೊದಲು ನರೇಂದ್ರ ಮೋದಿ ಅವರು ಯಾಕೆ ಬರ್ತಾರೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಕುಟುಕಿದ್ದಾರೆ.

ಸದ್ಯ ಬಿಜೆಪಿಯವರಿಗೆ ನಾನು‌ ಮನೆ ದೇವರು ಆಗಿಬಿಟ್ಟಿದ್ದೇನೆ. ನನ್ನ ಬಗ್ಗೆ ಮಾತನಾಡುವ ತನಕ ಅವರಿಗೆ ತಿಂದ ಅನ್ನ ಕರಗುವುದಿಲ್ಲ. ನಾನು ಬಿಜೆಪಿ ನಾಯಕರ ಅಯೋಗ್ಯ ಪದದ ಬಳಕೆ ರೆಕಾರ್ಡ್‌ ಆಗಿದೆಯಾ? ಆ ಪದದ ಸಮಾನಾರ್ಥಕ ಪದ ಯಾವುದು ಇದೆಯೋ ಅದೆಲ್ಲವನ್ನೂ ಬಳಸಿ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

25 ಸಂಸದರು ಅಯೋಗ್ಯರು

ಕರ್ನಾಟಕದಲ್ಲಿ ಬಿಜೆಪಿಯ 25 ಸಂಸದರು ಇದ್ದಾರೆ. ಅಷ್ಟು ಜನ ಇದ್ದರೂ ಏನು ಯೋಜನೆ ತಂದಿದ್ದಾರೆ. ಹೀಗಾಗಿ, ಬಿಜೆಪಿಯವರು ಅಯೋಗ್ಯರು ಎಂದು ಚಾಟಿ ಬೀಸಿದ್ದಾರೆ. ನಿಗಮ ಮಂಡಳಿ ನೇಮಕ ವಿಳಂಬ ವಿಚಾರವಾಗಿ ಮಾತನಾಡಿದ ಅವರು, ನಮ್ಮ ವರಿಷ್ಠರು ವಿಚಾರ ಮಾಡ್ತಾರೆ ಎಂದು ಜಾರಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES