Wednesday, January 15, 2025

ಮುಸ್ಲಿಂ ಯುವಕನೊಂದಿಗೆ ಪ್ರೀತಿ: ತಂಗಿ, ತಾಯಿಯನ್ನು ಕೆರೆಗೆ ತಳ್ಳಿದ ಯುವಕ!

ಮೈಸೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ತಂಗಿಯನ್ನು ಕೆರೆಗೆ ತಳ್ಳಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ.

ತಾಯಿ ಅನಿತಾ (40), ತಂಗಿ ಧನುಶ್ರೀ (19) ಮೃತ ದುರ್ಧೈವಿಗಳು, ನಿತಿನ್​ ತಾಯಿ ಮತ್ತು ತಂಗಿಯನ್ನು ಕೊಂದ ಕೊಲೆಪಾತಕ.

ಇದನ್ನೂ ಓದಿ: 29ನೇ ಮಹಡಿಯಿಂದ ಹಾರಿ ಬಾಲಕಿ ಆತ್ಮಹತ್ಯೆ!

ತಂಗಿ ಮುಸ್ಲಿಂ ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರಕ್ಕೆ ಅಣ್ಣ ತಂಗಿಯರ ನಡುವೆ ವೈ ಮನಸ್ಸು ಬೆಳೆದಿತ್ತು. ನೆನ್ನೆ ತಾಯಿ ಮತ್ತು ತಂಗಿಯನ್ನು ನಿತಿನ್​ ಬೈಕ್ ನಲ್ಲಿ ಕರೆದೊಯ್ದು ಕೆರೆಬಳಿ ಬೈಕ್​ ನಿಲ್ಲಿಸಿ ಮೊದಲು ತಂಗಿಯನ್ನು ಕೆರೆಗೆ ತಳ್ಳಿದ್ದಾನೆ. ಬಳಿಕ ರಕ್ಷಿಸಲು ಬಂದ ತಾಯಿಯನ್ನು ಕೆರೆಗೆ ತಳ್ಳಿ ಸಾಯಿಸಿದ್ದಾನೆ.

ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES