ಮೈಸೂರು : ನಮ್ಮದು ಬದುಕು, ಅವರದ್ದು ಭಾವನೆ. ಅವರು ಭಾವನೆ ಹಿಂದೆ ಹೊರಟಿದ್ದಾರೆ. ನಾವು ಬದುಕಿನ ಹಿಂದೆ ಹೊರಟಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಮುತ್ತಿನಮುಳುಸೋಗೆಯಲ್ಲಿ ಪಿರಿಯಾಪಟ್ಟಣ ತಾಲ್ಲೂಕಿನ 79 ಗ್ರಾಮಗಳ 150 ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಮಮಂದಿರ ಉದ್ಘಾಟನೆ ಮಾಡಿದ್ದಾರೆ ಬಹಳ ಸಂತೋಷ. ನಮಗೂ ಭಾವನೆಗಳಿವೆ. ಆದರೆ, ಬದುಕು ನಡೆಯಬೇಕಲ್ಲ. ನಿಮ್ಮ ಬದುಕಿಗೆ ಬೇಕಾದ ಯೋಜನೆಗಳನ್ನು ನಾವು ಗ್ಯಾರಂಟಿ ಮೂಲಕ ನೀಡಿದ್ದೇವೆ. ಇವರು ನಿಮಗೆ ಕೊಟ್ಟ ಮಂತ್ರಾಕ್ಷತೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಕೊಟ್ಟ ಅನ್ನಭಾಗ್ಯದ ಅಕ್ಕಿ ಇದೆ ಎಂದು ಕುಟುಕಿದರು.
ಈ ಸುದ್ದಿ ಓದಿದ್ದೀರಾ? : ಕಾಂಗ್ರೆಸ್ಸಿಗರು ಬಾಬರ್ ಸಂತತಿಯನ್ನು ಪ್ರೀತಿಸಿದಷ್ಟು ಅವರಪ್ಪಂದಿರನ್ನು ಪ್ರೀತಿಸಿರಲ್ಲ!: ಸಿ.ಟಿ ರವಿ
ವೆಂಕಟೇಶ್ ಹೆಸರಲ್ಲಿ ವೆಂಕಟೇಶ್ವರ ಇದ್ದಾನೆ
ರಾಮ ಎಲ್ಲಾ ಕಡೆ ಇದ್ದಾನೆ. ಸಿದ್ದರಾಮಯ್ಯ ಹೆಸರಲಿ ರಾಮ, ನನ್ನ ಹೆಸರಲ್ಲಿ ಶಿವ, ವೆಂಕಟೇಶ್ ಹೆಸರಲ್ಲಿ ವೆಂಕಟೇಶ್ವರ, ಮಹದೇವಪ್ಪ ಹೆಸರಲ್ಲಿ ಮಹದೇಶ್ವರ ಇದ್ದಾನೆ. ನಾವುಗಳು ಹಿಂದೂಗಳಲ್ಲವೆ? ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.