Sunday, December 29, 2024

ನೀವು ರಾಮಭಕ್ತರಾಗಿದ್ರೆ ಎದೆ ಸೀಳಿ ತೋರಿಸಿ : ಅಶ್ವತ್ಥ ನಾರಾಯಣ

ಬೆಂಗಳೂರು : ಸಿದ್ದರಾಮಯ್ಯ ಹೆಸರಲ್ಲಿ ರಾಮ, ತಮ್ಮ ಹೆಸರಲ್ಲಿ ಶಿವ ಇದ್ದಾನೆ ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಟಕ್ಕರ್ ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನೀವು ರಾಮಭಕ್ತರಾಗಿದ್ರೆ ಆಂಜನೇಯ ರೀತಿ ಎದೆಯನ್ನು ಸೀಳಿ ತೋರಿಸಿ. ಎದೆ ಬಗೆದು ತೋರಿಸಲಿ ನೋಡೋಣ ಎಂದು ಕುಟುಕಿದ್ದಾರೆ.

ಹಾಗಿದ್ರೆ ಯಾಕೆ ಭಯ, ಆತಂಕ ಯಾಕೆ ಪಡ್ತಿದ್ದಾರೆ. ಕುಂಬಳ ಕಾಯಿ‌ ಕಳ್ಳ ಅಂದ್ರೆ ಹೆಗಲು ನೋಡಿಕೊಳ್ಳೋದ್ಯಾಕೆ? ದುರಹಂಕಾರದ ಮಾತಿನಿಂದ ಎಲ್ಲರ ಭಾವನಗೆಗಳಿಗೆ ಧಕ್ಕೆ ತರುತ್ತಿದ್ದೀರಿ. ಸಚಿವರ ಬಾಯಿ ಮುಚ್ಚಿಸಲು ನಿಮ್ಮ ಕೈಲಿ ಆಗುತ್ತಿಲ್ಲ. ನಿಮ್ಮ ಬಾಯಿಗಳೇ ಹೊಲಸಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ದೊಣ್ಣೆ ಹಿಡಿಯೋ ಸಂಸ್ಕೃತಿ ಕಾಂಗ್ರೆಸ್ಸಿಗರದ್ದು

ರಾಮಭಕ್ತ ಅಂತ ಹೇಳಿಕೊಳ್ಳೋಕೆ ಹೇಗೆ ಬಾಯಿ ಬರುತ್ತೆ? ನೀವು ರಾಮ ಭಕ್ತರಾದ್ರೆ ನಮಗೆ ಬಹಳ ಸಂತೋಷ. ಸಚಿವ ಕೆ.ಎನ್. ರಾಜಣ್ಣ ದಿನಕ್ಕೊಂದು ಹೇಳಿಕೆ ಕೊಡ್ತಾರೆ, ಅವರ ಬಗ್ಗೆ ಏನ್ ಹೇಳೋಣ. ದೊಣ್ಣೆ ಹಿಡಿಯೋ ಸಂಸ್ಕೃತಿ ಕಾಂಗ್ರೆಸ್ ನವರದ್ದು ಎಂದು ಅಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES