Sunday, December 22, 2024

Bigg Boss kannada: ಕನ್ನಡಿಯ ಮುಂದೆ ತಮ್ಮೊಂದಿಗೆ ತಾವೇ ಮಾತನಾಡಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಗ್ರಾಂಡ್ ಫಿನಾಲೆಗೆ ಇನ್ನು ಎರಡನೇ ದಿನ ಬಾಕಿ ಉಳಿದಿದೆ. ಈ ಬಾರಿ ಕಪ್ ಯಾರ ಕೈ ಸೇರಬಹುದು ಎನ್ನುವ ಕುತೂಹಲ ಹೆಚ್ಚಾಗಿದೆ.

ಈ ನಡುವೆ ಕನ್ನಡಿಯ ಮುಂದು ಕುಳಿತು ಮಾತನಾಡಿಕೊಳ್ಳುವ ಅವಕಾಶವನ್ನು ಬಿಗ್ ಬಾಸ್ ಮನೆಯ ಸದಸ್ಯರಿಗೆ ನೀಡಿದ್ದಾರೆ. ಆತ್ಮಸಾಕ್ಷಿಯ ಕನ್ನಡಿಯಲ್ಲಿ ತಮ್ಮನ್ನು ತಾವೇ ಕಂಡುಕೊಂಡ ಬಿಗ್‌ಬಾಸ್‌ ಸ್ಪರ್ಧಿಗಳು ಇಷ್ಟು ದಿನಗಳಲ್ಲಿ ಕಟ್ಟಿಕೊಂಡ ತಮ್ಮದೇ ವ್ಯಕ್ತಿಚಿತ್ರಗಳನ್ನು ನೋಡಿ ಕರಗಿದ್ದಾರೆ.

ತಮ್ಮದೇ ಪ್ರತಿಬಿಂಬ ಕಂಡು ತಪ್ಪು-ಒಪ್ಪು, ಮನದಾಳದಲ್ಲಿ ಹುದುಗಿದ್ದ ನೋವು. ಇತರರಿಂದ ಹೇಳಿಸಿಕೊಂಡು ಅರಗಿಸಿಕೊಳ್ಳಲಾರದೆ ಉಳಿದುಕೊಡ ಮಾತುಗಳು ಹೊರಬಂದಿವೆ.

ಈ ವಾರ ಮನೆಯಲ್ಲಿ ವಿನಯ್, ಸಂಗೀತಾ, ಪ್ರತಾಪ್, ಕಾರ್ತಿಕ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಉಳಿದುಕೊಂಡಿದ್ದಾರೆ. “ನನ್ನ ಕಾಣುವ ಹುಡುಕಾಟದಲ್ಲಿ ನನ್ನನ್ನು ಹುಡುಕಿಕೊಂಡಿರುವೆ. ಯಾರು ಜೊತೆಯಿಲ್ಲದಾಗ ನೀನಿದ್ದೆ’ ಎಂದು ಸಂಗೀತಾ ಹೇಳಿದ್ದಾರೆ.

ಇತ್ತ ಕಾರ್ತಿಕ್, ‘ಸ್ನೇಹವನ್ನು ಬಳಸಿಕೊಳ್ಳುತ್ತೀಯಾ ಎನ್ನುವ ಆರೋಪ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

RELATED ARTICLES

Related Articles

TRENDING ARTICLES