Wednesday, January 22, 2025

ಬಾಲರಾಮನ ಗರ್ಭಗುಡಿ ಪ್ರವೇಶಿಸಿದ ಕೋತಿ : ಸಾಕ್ಷಾತ್ ಹನುಮಂತನೇ ಬಂದ ಎಂದ ಟ್ರಸ್ಟ್

ಬೆಂಗಳೂರು : ಅಯೋಧ್ಯೆಯ ಬಾಲರಾಮನ ಗರ್ಭಗುಡಿಗೆ ಕೋತಿಯೊಂದು ಪ್ರವೇಶ ಮಾಡಿದೆ. ಹನುಮಂತನೇ ರಾಮಲಲ್ಲಾನನ್ನು ನೋಡಲು ಬಂದಂತೆ ಭಾಸವಾಯಿತು ಎಂದು ಶ್ರೀ ರಾಮಜನ್ಮಭೂಮಿ ಟ್ರಸ್ಟ್ ಅಭಿಪ್ರಾಯಪಟ್ಟಿದೆ.

ಈ ಕುರಿತು ಟ್ವೀಟ್ ಮಾಡಿರುವ ಟ್ರಸ್ಟ್, ರಾಮಮಂದಿರದೊಳಗೆ ಕೋತಿಯೊಂದು ಪ್ರವೇಶಿಸಿದ್ದು, ಯಾವುದೇ ಸಮಸ್ಯೆ ಮಾಡಿಲ್ಲ. ಇದೊಂದು ಅವಿಸ್ಮರಣೀಯ ಘಟನೆ ಎಂದು ಹೇಳಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.

ಜ.22ರಂದು ಬಾಲರಾಮನ ಪ್ರಾಣ ಪ್ರತಿಷ್ಠೆ ನಡೆಯಿತು. ಮರುದಿನ (ಜ.23) ಸಂಜೆ 5.30ರ ವೇಳೆಯಲ್ಲಿ ಕೋತಿಯೊಂದು ದಕ್ಷಿಣ ದಿಕ್ಕಿನಿಂದ ಮಂದಿರ ಪ್ರವೇಶ ಮಾಡಿದೆ. ನೇರವಾಗಿ ಗರ್ಭಗುಡಿಗೆ ತೆರಳಿ ಉತ್ಸವ ಮೂರ್ತಿ ಬಳಿ ಕೂತಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಕೋತಿಯನ್ನು ಓಡಿಸಲು ಮುಂದಾಗಿದ್ದಾರೆ. ಆಗ ಕೋತಿ ಯಾವುದೇ ತೊಂದರೆ ಮಾಡದೆ ಪೂರ್ವ ದ್ವರದಿಂದ ಹೊರಗೆ ಬಂದಿದೆ ಎಂದು ತಿಳಿಸಿದೆ.

ಬಾಲರಾಮನ ದರ್ಶನಕ್ಕೆ ಸಾವಿರಾರು ಜನ ಸಾಲುಗಟ್ಟಿ ನಿಂತಿದ್ದರು. ಯಾರಿಗೂ ತೊಂದರೆ ಮಾಡದೆ ಕೋತಿ ಹಾದು ಹೋಗಿದೆ. ಬಾಲರಾಮನ ದರ್ಶನಕ್ಕೆ ಸಾಕ್ಷಾತ್ ಹನುಂತನೇ ಬಂದಿದ್ದಾನೆ ಎಂದು ಭದ್ರತಾ ಸಿಬ್ಬಂದಿ ಭಾವಿಸಿ ಸಂತಸಗೊಂಡಿದ್ದಾರೆ ಎಂದು ಟ್ರಸ್ಟ್ ಹೇಳಿದೆ.

RELATED ARTICLES

Related Articles

TRENDING ARTICLES