ಬೆಂಗಳೂರು : ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಿಕ್ಕ ಹಾಗಡೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಟೊಮೊಟೊ ಬೆಳೆ ನಾಶವಾಗಿದೆ.
ರಾಜಪ್ಪ ಎಂಬವರಿಗೆ ಸೇರಿದ ಒಂದು ಎಕರೆ ಟೊಮೊಟೊ ತೋಟದಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚೆಗೆ ಕಾಡು ಪ್ರಾಣಿಗಳು ಆಹಾರ ಹರಿಸಿಕೊಂಡು ಕಾಡಿನಿಂದ ನಾಡಿನಕಡೆ ಮುಖ ಮಾಡುತ್ತಿದೆ.
ಅದರಲ್ಲೂ ತಮಿಳುನಾಡು ಗಡಿ ಭಾಗದ ವನಕನಹಳ್ಳಿ ಡೆಂಕಣಿಕೋಟೆ ಶಾಣ್ಮಾವು ಹೊಸೂರು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡಾನೆಗಳು ಕರ್ನಾಟಕದ ಗಡಿಭಾಗದಲ್ಲಿ ಕಾಣಿಸಿಕೊಂಡು ಜನರಿಗೆ ನಿದ್ದೆಗೆಡಿಸಿದೆ. ಅದು ಮಾತ್ರವಲ್ಲದೆ ಕಾಡಂಚಿನಲ್ಲಿರುವ ಗ್ರಾಮಗಳಿಗೆ ಮತ್ತು ರೈತರಿಗೆ ತಲೆನೋವಾಗಿ ಪರಿಣಮಿಸಿದೆ. ವರ್ಷವೆಲ್ಲ ಕಷ್ಟಪಟ್ಟು ಬೆಳೆದ ಬೆಳೆ, ಕಾಡಾನೆಗಳಿಂದಾಗಿ ರೈತನ ಬಾಳಿಗೆ ಕೊಳ್ಳಿ ಇಟ್ಟಿದೆ.
ಲಕ್ಷಾಂತರ ರೂಪಾಯಿ ರೈತರಿಗೆ ನಷ್ಟ
ಇನ್ನು ಕಳೆದ ರಾತ್ರಿ ನಾಲ್ಕು ಕಾಡಾನೆಗಳು ತೋಟಕ್ಕೆ ಲಗ್ಗೆ ಇಟ್ಟು ಟೊಮೊಟೊ ರಾಗಿ ಮೆದೆ ದಾಂದಲೆ ನಡೆಸಿದ್ದಲ್ಲದೆ, ರೈತನಿಗೆ ಲಕ್ಷಾಂತರ ರೂಪಾಯಿ ಬೆಳೆ ಹಾನಿ ಮಾಡಿದೆ. ತೋಟಕ್ಕೆ ನುಗ್ಗಿ ಸಂಪೂರ್ಣ ಬೆಳೆನಾಶ ಮಾಡಿದೆ. ಇದರಿಂದ ಲಕ್ಷಾಂತರ ರೂಪಾಯಿ ರೈತರಿಗೆ ನಷ್ಟ ಆಗಿದೆ. ಇನ್ನು ಅರಣ್ಯ ಅಧಿಕಾರಿಗಳು ಆನೆಗಳನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ರೈತರು ಸಾಕಷ್ಟು ಬಾರಿ ದೂರುಗಳು ಸಲ್ಲಿಕೆ ಮಾಡಿದ್ರು ಸಹ ಅರಣ್ಯ ಅಧಿಕಾರಿಗಳು ಕಂಡು ಕಾಣದ ರೀತಿಯಲ್ಲಿ ಇದ್ದಾರೆ.