Wednesday, January 22, 2025

3 ನೋ ಬಾಲ್.. 3 ಮದುವೆ.. : ಶೋಯೆಬ್ ಮಲಿಕ್ ಟ್ರೋಲ್

ಬೆಂಗಳೂರು : ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್​ ಮಲಿಕ್ ಅವರು ಸಾನಿಯಾ ಮಿರ್ಜಾ ಅವರಿಂದ ದೂರವಾಗಿ 3ನೇ ಮದುವೆಯಾಗಿದ್ದಾರೆ. ಆ ಮೂಲಕ ಟೀಕೆಗೆ ಗುರಿಯಾಗಿದ್ದರು.

ಇದೀಗ, ಮತ್ತೊಮ್ಮೆ ಮಲಿಕ್ ನೆಟ್ಟಿಗರಿಗೆ ಆಹಾರವಾಗಿದ್ದಾರೆ. ಸದ್ಯ ಬಾಂಗ್ಲಾ ಪ್ರೀಮಿಯರ್ ಲೀಗ್​ನಲ್ಲಿ ಆಡುತ್ತಿರುವ ಮಲಿಕ್ ಅವರನ್ನು ನೆಟಿಜನ್​ಗಳು ಮತ್ತೊಮ್ಮೆ ಟ್ರೋಲ್ ಮಾಡುತ್ತಿದ್ದಾರೆ.

ಶೋಯೆಬ್ ಮಲಿಕ್ ಒಂದೇ ಓವರ್​ನಲ್ಲಿ ಮೂರು ನೋ ಬಾಲ್ ಎಸೆದಿದ್ದಾರೆ. ಸ್ಪಿನ್ನರ್ ಒಬ್ಬ ನೋ ಬಾಲ್ ಹಾಕಿದರೆ ಅದೊಂದು ಅಪರಾಧವೆಂದು ಕ್ರಿಕೆಟ್ ವಿಶ್ಲೇಷಕರು ಪರಿಗಣಿಸುತ್ತಾರೆ. ಇನ್ನೂ, ನೆಟ್ಟಿಗರು ಈ 3 ನೋ ಬಾಲ್​ಗಳನ್ನು ಅವರ 3 ಮದುವೆಗೆ ತಳುಕು ಹಾಕಿ ಕಾಮೆಂಟ್ ಹರಿಬಿಡುತ್ತಿದ್ದಾರೆ.

NB, NB, NB, WD

ಖುಲ್ನಾ ಟೈಗರ್ಸ್‌ ವಿರುದ್ಧದ ಪಂದ್ಯದಲ್ಲಿ ಶೋಯೆಬ್ ಮಲಿಕ್ ಕೇವಲ ಒಂದು ಓವರ್ ಬೌಲ್ ಮಾಡಿದರು. ಈ ಓವರ್ ನಲ್ಲಿ ನೋ ಬಾಲ್, ನೋ ಬಾಲ್, ನೋ ಬಾಲ್, ವೈಡ್ ಎಸೆದರು. ಸ್ಪಿನ್ ಬೌಲರ್​ ಒಬ್ಬ ಈ ರೀತಿ 3 ನೋ ಬಾಲ್ ಎಸೆದಿದ್ದು ಅಭಿಮಾನಿಗಳಿಗೆ ಅಚ್ಚರಿ ತಂದಿದೆ. ಅಲ್ಲದೆ, ಈ ಓವರ್​ನಲ್ಲಿ 18 ರನ್​ ಬಿಟ್ಟುಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES