ಬೆಂಗಳೂರು : ನಾನು ಚರ್ಚ್, ಮಸೀದಿಗೆ ಹೋಗ್ತೀನಿ.. ದೇವಸ್ಥಾನಕ್ಕೆ ಹೋಗಲ್ಲ. ನಿಮ್ಮ ಆಚರಣೆ ಹೇಗಿದೆ? ತತ್ವ ಹೇಗಿದೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನೀವು ಕರೆದುಕೊಂಡು ಹೋದರೆ ಬರುತ್ತೇನೆ. ನಾನು ಯಾವ ದೇವಸ್ಥಾನಕ್ಕೂ ಹೋಗಲ್ಲ. ವಾರಣಾಸಿ, ಚರ್ಚ್ಗೆ ಮಸೀದಿಗೆ ಹೋಗಿದ್ದೀನಿ. ಇತಿಹಾಸ, ಸಂಸ್ಕೃತಿ ತಿಳಿಯೋಕೆ ಹೋಗ್ತೀನಿ ಎಂದು ಹೇಳಿದರು.
ಬಿಜೆಪಿಯಿಂದ ಅಯೋಧ್ಯೆಗೆ ಯಾತ್ರೆ ಕರೆದುಕೊಂಡು ಹೋಗುವ ವಿಚಾರವಾಗಿ ಮಾತನಾಡಿ, ಅಯೋಧ್ಯೆಗೆ ಕರೆದುಕೊಂಡು ಹೋಗಿಲಿ. ಬಿಜೆಪಿ ರಾಜಕೀಯ ಮಾಡ್ತಿಲ್ಲ ಅಂತ ಬೊಬ್ಬೆ ಹೊಡೆಯುತ್ತಾರೆ. ಮಾಡ್ತಿರೋದು ಏನು ಹಾಗಾದ್ರೆ? ನಮ್ಮ ಸರ್ಕಾರದಿಂದ ಕಡೆಯಿಂದ ಕರೆದುಕೊಂಡು ಹೋಗುವ ಚರ್ಚೆಯಿಲ್ಲ. ಮುಜರಾಯಿ ಸಚಿವರನ್ನ ಕೇಳಬೇಕು ಎಂದು ತಿಳಿಸಿದರು.
ಜ.29, 30, 31ರಂದು ಸಮ್ಮೇಳನ
ಬಾಲಿವುಡ್, ಟಾಲಿವುಡ್ ಚಿತ್ರಗಳ ಗ್ರಾಫಿಕ್ಸ್ ಇಲ್ಲೇ ಸಿದ್ದವಾಗ್ತಿವೆ. ಗೇಮಿಂಗ್, ವಿಜುಯಲ್, ಎಫೆಕ್ಟ್ ಗೇಮಿಂಗ್ ನಲ್ಲಿ ಹೆಚ್ಚು ಸ್ಥಾನ ಪಡೆಯಬೆಕಾದ್ರೆ GAFX ಬಹಳ ಪ್ರಮುಖವಾಗಿದೆ. ನಮ್ಮ ದೇಶದಲ್ಲಿ ಎಲ್ಲೂ ಈ ರೀತಿಯ ಸರ್ಕಾರಿ ಕಾರ್ಯಕ್ರಮ ನಡೆಯಲ್ಲ. ಬಿ ಟು ಬಿ ಫ್ಲಾಟ್ ಫಾರಂ ಇರುತ್ತೆ. ವಿಶ್ವಾದ್ಯಂತ ಬಂಡವಳ ತರೋದಕ್ಕೆ ಪ್ರಾಮಾಣಿಕ ಪ್ರಯತ್ನ ಇದು. 6000 ಕ್ಕಿಂತ ಹೆಚ್ಚು ಜನರು ಈ ಕಾರ್ಯಕ್ರಮಕ್ಕೆ ಬರ್ತಾರೆ. ಜನವರಿ 29, 30, 31 ರಂದು ಲಲಿತ್ ಅಶೋಕ್ ಹೋಟೆಲ್ ನಲ್ಲಿ ಈ ಸಮ್ಮೇಳನ ನಡೆಯುತ್ತೆ ಎಂದು ಹೇಳಿದರು.