ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನೆನಪಿಡಿ.. ಪ್ರಭು ಶ್ರೀರಾಮ ನಿಮ್ಮನ್ನು ಕ್ಷಮಿಸಬಹುದು. ಆದರೆ, ರಾಮಭಕ್ತರಲ್ಲ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್‌ನವರಿಗೆ ಪ್ರಭು ಶ್ರೀರಾಮನನ್ನು ನೆನದರೆ ಯಾಕಿಷ್ಟು ದ್ವೇಷ ಎನ್ನುವುದು ಯಕ್ಷಪ್ರಶ್ನೆ ಎಂದು ಕುಟುಕಿದೆ.
ಇಡೀ ವಿಶ್ವವೇ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಧನ್ಯವಾಗಿದೆ, ಸಂಭ್ರಮಿಸಿದೆ, ದೇವಲೋಕವನ್ನೇ ಧರೆಗಿಳಿಸಿದೆ. ಆದರೆ, ತುಘಲಕ್ ಸರ್ಕಾರ ಸಿಎಂ ತವರೂರಲ್ಲಿ ಮಾತ್ರ ಶ್ರೀರಾಮನ ಸಂಭ್ರಮಾಚರಣೆಗೆ ನಿರ್ಬಂಧ ಹೇರಿ ಆಷಾಢಭೂತಿತನವನ್ನು ತೋರಿಸಿದೆ ಎಂದು ಛೇಡಿಸಿದೆ.
ರಾಮನಿಗೆ, ರಾಮಭಕ್ತರಿಗೆ ಅಪಮಾನ
24 ದಿನ ಉರಿಯಬೇಕಿದ್ದ ಅಗರಬತ್ತಿಯನ್ನು ಕೇವಲ ಎರಡು ತಾಸಿಗೆ ನಂದಿಸಲಾಗಿದೆ. ಈ ಮೂಲಕ ಶ್ರೀರಾಮನಿಗೆ, ರಾಮಭಕ್ತರಿಗೆ ಅಪಮಾನ ಮಾಡಿ ತನ್ನ ಘನತೆಯನ್ನು ಕಾಂಗ್ರೆಸ್ ಸರ್ಕಾರ ಕಳೆದುಕೊಂಡಿದೆ ಎಂದು ಬಿಜೆಪಿ ಚಾಟಿ ಬೀಸಿದೆ.
ಪ್ರಭು ಶ್ರೀರಾಮನನ್ನು ವಿರೋಧಿಸಿ ಬಹಿಷ್ಕಾರ ಹಾಕಿರುವ @INCIndia, @INCKarnataka ಮತ್ತು ಅದರ ಎಡಬಿಡಂಗಿಗಳ ಕೃತ್ಯಗಳು:
▪️ರಾಮ ಮಂದಿರಕ್ಕೆ ತಡೆಕೋರಿ ಕೋರ್ಟ್ಗೆ ಅರ್ಜಿ
▪️ರಾಮ ಸೇತು ಕೇವಲ ಕಾಲ್ಪನಿಕ ಎಂದು ಮೊಂಡುವಾದ
▪️ರಾಮ ಮಂದಿರ ತೀರ್ಪು ಕಾಯ್ದಿರಿಸಲು ಷಡ್ಯಂತ್ರ
▪️ರಾಮ ಪ್ರಾಣ ಪ್ರತಿಷ್ಠಾಪನೆಗೆ ಬಹಿಷ್ಕಾರ
▪️ರಾಮ ಪ್ರತಿಷ್ಠಾ…— BJP Karnataka (@BJP4Karnataka) January 23, 2024