Friday, May 17, 2024

ಬಾಲ ರಾಮನ ಪ್ರಾಣ ಪ್ರತಿಷ್ಠೆ ದಿನ ಜನಿಸಿದ ಪುತ್ರನಿಗೆ ‘ರಾಮ್ ರಹೀಮ್’ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ

ಉತ್ತರ ಪ್ರದೇಶ : ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ದಿನವೇ ಮುಸ್ಲಿಂ ಮಹಿಳೆಯೊಬ್ಬರು ಗಂಡು ಮಗುವೆಗೆ ಜನ್ಮ ನೀಡಿದ್ದಾರೆ. ವಿಶೇಷವೆಂದರೆ, ಆ ಮಗುವಿಗೆ ‘ರಾಮ್ ರಹೀಮ್’ ಎಂದು ಹೆಸರು ಇಡಲಾಗಿದೆ.

ಜನವರಿ 22ರಂದು (ನಿನ್ನೆ) ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆ ನಡೆಯಿತು. ಅದರಂತೆ ನಿನ್ನೆ ದಿನವೇ ಜನಿಸಿದ ಮಕ್ಕಳಿಗೆ ‘ರಾಮ’ ಎಂಬ ಹೆಸರನ್ನು ಅನೇಕ ಜನರು ಇಟ್ಟಿರುವ ಬಗ್ಗೆ ವರದಿಯಾಗಿದೆ.

ಅದರಂತೆ ಉತ್ತರ ಪ್ರದೇಶದ ಫಿರೋಜಾಬಾದ್​ನ ಫರ್ಜಾನಾ ಎಂಬ ಮಹಿಳೆ ಜ.22ರಂದು (ಸೋಮವಾರ) ಜಿಲ್ಲಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮುಸ್ಲಿಂ ದಂಪತಿ ಹಿಂದೂ-ಮುಸ್ಲಿಂ ಐಕ್ಯತೆಯ ಸಂದೇಶವನ್ನು ಸಾರುವ ಸಲುವಾಗಿ ತಮ್ಮ ಪುತ್ರನಿಗೆ ‘ರಾಮ್​ ರಹೀಮ್’​ ಎಂಬ ಹೆಸರನಿಟ್ಟಿದ್ದಾರೆ.

ಮೊಮ್ಮಗನಿಗೆ ಹೆಸರಿಟ್ಟಿ ಅಜ್ಜಿ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಗುವಿನ ಅಜ್ಜಿ ಹುಸ್ನಾ ಬಾನು, ಹಿಂದೂ-ಮುಸ್ಲಿಂ ಏಕತೆಯ ಸಂದೇಶ ನೀಡಲು ಮಗುವಿಗೆ ರಾಮ್ ರಹೀಮ್ ಎಂದು ಹೆಸರಿಟ್ಟಿದ್ದೇವೆ ಎಂದು ಹೇಳಿದ್ದಾರೆ. ಜಿಲ್ಲಾ ಆಸ್ಪತ್ರೆ ವೈದ್ಯ ಡಾ. ನವೀನ್ ಜೈನ್ ಮಾತನಾಡಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗುವಿಗೆ ‘ರಾಮ್ ರಹೀಮ್’ ಎಂದು ಹೆಸರಿಟ್ಟಿರುವುದಾಗಿ ಅಜ್ಜಿ ಹುಸ್ನಾ ಬಾನು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES