Saturday, November 2, 2024

ಪ್ರತಿಯೊಂದು ನಾಲಗೆಯೂ ರಾಮ್ ರಾಮ್ ಎಂದು ಜಪಿಸುತ್ತಿದೆ : ಸಿಎಂ ಯೋಗಿ

ಅಯೋಧ್ಯೆ : ‘ಇಂದು ಪ್ರತಿಯೊಬ್ಬ ರಾಮ ಭಕ್ತನಿಗೂ ಹೆಮ್ಮೆ ಮತ್ತು ಸಂತೃಪ್ತಿಯ ಭಾವನೆ ಇದೆ. ಈ ದಿನಕ್ಕಾಗಿ ಕಾಯುತ್ತಾ 500 ವರ್ಷಗಳು ಕಳೆದೆವು’ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದರು.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಬಳಿಕ ಗಣ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಮಮಂದಿರ ಉದ್ಘಾಟನೆ ನಮ್ಮೆಲ್ಲರಿಗೂ ಅತ್ಯಂತ ಭಾವನಾತ್ಮಕ ಕ್ಷಣವಾಗಿದೆ. 500 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ ಎಂದು ಹೇಳಿದರು.

ಮನಸ್ಸು ಭಾವನಾತ್ಮಕವಾಗಿದ್ದು, ಈ ಕ್ಷಣವನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ. ಪ್ರತಿಯೊಂದು ನಾಲಿಗೆಯೂ ರಾಮ್ ರಾಮ್ ಎಂದು ಜಪಿಸುತ್ತಿದೆ. ನಮ್ಮೆಲ್ಲರಿಗೂ ಇದು ಭಾವನಾತ್ಮಕ ಕ್ಷಣವಾಗಿದೆ. ಇದು 500 ವರ್ಷಗಳ ಕಾಯುವಿಕೆಯ ನಂತರ ಬಂದಿದ್ದು, ಪ್ರಭು ಶ್ರೀರಾಮರು ಮತ್ತೆ ಅಯೋಧ್ಯೆಯಲ್ಲಿ ವಿರಾಜಮಾನರಾಗಿದ್ದಾರೆ ಎಂದು ತಿಳಿಸಿದರು.

ಇಡೀ ದೇಶವು ರಾಮನ ಭಕ್ತಿಯಲ್ಲಿ ಮುಳುಗಿದೆ

ಈ ಐತಿಹಾಸಿಕ ಕ್ಷಣದಲ್ಲಿ, ದೇಶದ ಪ್ರತಿಯೊಂದು ನಗರ ಮತ್ತು ಹಳ್ಳಿಗಳು ಅಯೋಧ್ಯೆಯಾಗಿ ಮಾರ್ಪಟ್ಟಿವೆ ಮತ್ತು ಪ್ರತಿ ಹಾದಿಯು ರಾಮ ಜನ್ಮಭೂಮಿಯತ್ತ ಸಾಗುತ್ತಿದೆ. ಇಡೀ ದೇಶವು ಭಗವಾನ್ ರಾಮನ ಭಕ್ತಿಯಲ್ಲಿ ಮುಳುಗಿದೆ. ನಾವು ತ್ರೇತಾಯುಗಕ್ಕೆ ಬಂದಿದ್ದೇವೆಂದು ತೋರುತ್ತಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದರು.

RELATED ARTICLES

Related Articles

TRENDING ARTICLES