Wednesday, January 22, 2025

ಇನ್ನುಮುಂದೆ ರಾಮರಾಜ್ಯ ಶುರುವಾಗಲಿದೆ: ರಾಮಮಂದಿರ ಪ್ರಧಾನ ಅರ್ಚಕ

ಅಯೋಧ್ಯೆ: ಅಯೋಧ್ಯೆ ರಾಮಮಂದಿರದ ಉದ್ಘಾಟನೆಯು ಇಂದು ಸುಸೂತ್ರವಾಗಿ ನೆರವೇರಿದ್ದು ಇಂದಿನಿಂದ ರಾಮರಾಜ್ಯ ಶುರುವಾಗಲಿದೆ ಎಂದು ಅಯೋಧ್ಯೆ ರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಹೇಳಿದ್ದಾರೆ.

ಈ ಕುರಿತು ನ್ಯೂಸ್ ಏಜೆನ್ಸಿ ಕಂಪೆನಿಯಾದ ಎಎನ್​ಐ ನಲ್ಲಿ ಹೇಳಿಕೊಂಡಿರುವ ಅವರು,  ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಆಗುವ ಮೂಲಕ ಎಲ್ಲ ಅಸಮಾನತೆಗಳು ಕೊನೆಗೊಳ್ಳುತ್ತವೆ. ರಾಮ ರಾಜ್ಯ ಶುರು ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮನ ಪ್ರಾಣಪ್ರತಿಷ್ಠಾ ಕಾರ್ಯ ಸುಸೂತ್ರ!

ಇಂದು (ಜ.22) ರಂದು ಸುಮಾರು 500 ವರ್ಷಗಳ ಹೋರಾಟದ ಕನಸು ಇಂದು ನನಸಾಗಿದೆ. ಪ್ರಧಾನಿ ಮೋದಿ ಸಕಲ ಶಾಸ್ತ್ರೋಕ್ತವಾಗಿ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಿದ್ದು ದೇಶವೇ ಸಂಭ್ರಮಿಸುತ್ತಿದೆ.

RELATED ARTICLES

Related Articles

TRENDING ARTICLES