Monday, December 23, 2024

ಇನ್ಮುಂದೆ ನಮ್ಮ ರಾಮ ಟೆಂಟ್​ನಲ್ಲಿ ವಾಸಿಸುವುದಿಲ್ಲ, ಭವ್ಯ ಮಂದಿರದಲ್ಲಿ ಇರುತ್ತಾನೆ : ಪ್ರಧಾನಿ ಮೋದಿ

ಅಯೋಧ್ಯೆ : ಇನ್ಮುಂದೆ ನಮ್ಮ ರಾಮ ಟೆಂಟ್‌ನಲ್ಲಿ ವಾಸಿಸುವುದಿಲ್ಲ, ಭವ್ಯ ಮಂದಿರದಲ್ಲಿ ವಿರಾಜಮಾನನಾಗಿರುತ್ತಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠೆ ನೆರವೇರಿಸಿದ ಬಳಿಕ ಬೃಹತ್‌ ವೇದಿಕೆ ಕಾರ್ಯಕ್ರಮವನ್ನುದ್ದೇಶಿ ಅವರು ಮಾತನಾಡಿದರು.

ಈ ಶುಭ ಸಂದರ್ಭದಲ್ಲಿ ನಾನು ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಹೇಳಲು ತುಂಬಾ ವಿಷಯಗಳಿವೆ. ಆದರೆ, ಸಂತಸದಿಂದ ನನಗೆ ಮಾತೇ ಬರುತ್ತಿಲ್ಲ. ಈ ಸಮರ್ಪಣೆಯ ಕ್ಷಣವು ಭಗವಾನ್ ರಾಮನ ಆಶೀರ್ವಾದ. ರಾಮ ಪ್ರತಿಯೊಬ್ಬ ಭಾರತೀಯನ ಅಂತರಂಗದಲ್ಲಿ ವಿರಾಜಮಾನನಾಗಿದ್ದಾನೆ ಎಂದು ನುಡಿದರು.

ರಾಮಮಂದಿರ ಕಟ್ಟಿದರೆ ಬೆಂಕಿ ಹೊತ್ತಿಕೊಳ್ಳುತ್ತಾ?

ಕೊನೆಗೂ ನಮ್ಮ ರಾಮ ಬಂದಿದ್ದಾನೆ. ಪ್ರತಿಯೊಬ್ಬ ಭಾರತೀಯನ ಅಂತರಂಗದಲ್ಲಿ ವಿರಾಜಮಾನನಾಗಿದ್ದಾನೆ. ರಾಮಮಂದಿರ ಕಟ್ಟಿದರೆ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಕೆಲವರು ಹೇಳುತ್ತಿದ್ದ ಕಾಲವೊಂದಿತ್ತು. ಈ ರಾಮಲಲ್ಲಾ ದೇವಾಲಯದ ನಿರ್ಮಾಣವು ಶಾಂತಿ, ತಾಳ್ಮೆ, ಪರಸ್ಪರ ಸಾಮರಸ್ಯ ಮತ್ತು ಭಾರತೀಯ ಸಮಾಜದ ಸಮನ್ವಯದ ಸಂಕೇತವಾಗಿದೆ. ಈ ನಿರ್ಮಾಣವು ಬೆಂಕಿಗೆ ಜನ್ಮ ನೀಡುವುದಿಲ್ಲ, ಆದರೆ, ಶಕ್ತಿಗೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

RELATED ARTICLES

Related Articles

TRENDING ARTICLES