Thursday, January 23, 2025

ಅರ್ಧ ಗಂಟೆ ಭಾಷಣ.. ಬರೋಬ್ಬರಿ 114 ಬಾರಿ ‘ರಾಮ ನಾಮ’ ಸ್ಮರಿಸಿದ ಮೋದಿ

ಅಯೋಧ್ಯೆ : ಪ್ರಧಾನಿ ನರೇಂದ್ರ ಮೋದಿ ಅವರು 35 ನಿಮಿಷದ ತಮ್ಮ ಭಾಷಣದಲ್ಲಿ ಬರೋಬ್ಬರಿ 114 ಬಾರಿ ‘ರಾಮ ನಾಮ’ ಸ್ಮರಣೆ ಮಾಡಿದ್ದಾರೆ.

ಅಯೋಧ್ಯೆಯಲ್ಲಿಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಮಧ್ಯಾಹ್ನ 12.05ಕ್ಕೆ ಗರ್ಭಗುಡಿಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನಗಳು ಪ್ರಾರಂಭವಾದವು. ಸುಮಾರು ಒಂದು ಗಂಟೆಗಳ ಕಾಲ ನಡೆಯಿತು. ಬಳಿಕ ಪ್ರಧಾನಿ ಮೋದಿ ರಾಮನಿಗೆ ಮಂಗಳಾರತಿ ಬೆಳಗಿದರು.

ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಿ ಮೋದಿ ತಮ್ಮ 11 ದಿನಗಳ ಉಪವಾಸವನ್ನು ಅಂತ್ಯಗೊಳಿಸಿದರು. ಪ್ರಾಣ ಪ್ರತಿಷ್ಠಾಪನೆ ಬಳಿಕ ಮೋದಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸುಮಾರು 35 ನಿಮಿಷ ಭಾಷಣ ಮಾಡಿದ ಅವರು 114 ಬಾರಿ ರಾಮನ ಹೆಸರನ್ನು ಸ್ಮರಿಸಿದರು. ಇದೇ ವೇಳೆ ರಾಮ ಮಂದಿರ ನಿರ್ಮಾಣಕ್ಕೆ ಶ್ರಮಿಸಿದ ಕಾರ್ಮಿಕರ ಮೇಲೆ ಪುಷ್ಪವೃಷ್ಟಿ ಗೈದು ಗೌರವ ಸಲ್ಲಿಸಿದರು.

ಈ ಸುದ್ಧಿ ಓದಿದ್ದೀರಾ? : ರಾವಣ, ದುರ್ಯೋಧನನಿಗೆ ಆದ ಗತಿಯೇ ನಿಮಗೂ : ಆರ್. ಅಶೋಕ್ ಕೆಂಡ 

ರಾಮ ಭಾರತದ ವಿಕಾಸ

‘ರಾಮ ಭಾರತದ ವಿಚಾರ, ರಾಮ ಭಾರತದ ವಿಕಾಸ, ರಾಮ ಭಾರತದ ಚೇತನ, ರಾಮ ಭಾರತದ ಚಿಂತನೆ, ರಾಮ ಭಾರತದ ಪ್ರತಾಪ, ರಾಮ ಭಾರತದ ಪ್ರಭಾವ, ರಾಮ ನೀತಿಯೂ ಹೌದು. ರಾಮ ನಿರಂತರತೆಯೂ ಹೌದು, ರಾಮ ವ್ಯಾಪಕವೂ ಹೌದು’ ಎಂದು ಪ್ರಧಾನಿ ಮೋದಿ ಬಣ್ಣಸಿದರು.

RELATED ARTICLES

Related Articles

TRENDING ARTICLES