Wednesday, January 22, 2025

‘ಜೈ ಶ್ರೀರಾಮ್’ ಘೋಷಣೆ ಮೊಳಗಿಸಿದ ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು : ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಪಾಲ್ಗೊಂಡರು.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಜೈ ಶ್ರೀರಾಮ್ ಎಂದು ಘೋಷಣೆ ಮೊಳಗಿಸಿದ್ದಾರೆ.

ಅಯೋಧ್ಯೆಯಲ್ಲಿ ಇಂದು ನಡೆದ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀ ಬಾಲ ರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾದ ಪುಣ್ಯ ನನ್ನದಾಯಿತು. ಈ ದೈವ ಕಾರ್ಯದಲ್ಲಿ ಪೂಜ್ಯ ತಂದೆ-ತಾಯಿ ಅವರೊಂದಿಗೆ ಭಾಗವಹಿಸಿದ್ದು ನನಗೆ ಧನ್ಯತೆಯ ಅನುಭೂತಿ ನೀಡಿದೆ. ನಿಖಿಲ್ ಕುಮಾರ್ವ ಅವರು ಈ ದಿವ್ಯಕ್ಷಣಕ್ಕೆ ಸಾಕ್ಷಿಯಾದರು ಎಂದು ಹೇಳಿದ್ದಾರೆ.

ದೇವೇಗೌಡರಿಗೆ ತಲೆ ಬಾಗಿ ನಮಸ್ಕರಿಸಿದ ಮೋದಿ  

ಇನ್ನೂ ಸರತಿ ಸಾಲಿನಲ್ಲಿ ನಿಂತಿದ್ದ ವಿಐಪಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದರು. ಎಲ್ಲರಿಗೂ ನಮಸ್ಕಾರ ಮಾಡುತ್ತಿದ್ದರು. ಆದರೆ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಕಂಡ ಮೋದಿ ತಲೆ ಬಾಗಿ ನಮಸ್ಕಾರ ಎಂದರು. ಇದನ್ನು ಅಂಬಾನಿ ಮತ್ತು ನಟ ರಜನಿಕಾಂತ್ ಕೂಡ ದೇವೇಗೌಡ್ರು ಮತ್ತು ಕುಮಾರಸ್ವಾಮಿ ಪಕ್ಕದಲ್ಲಿ ನಿಂತು ನೋಡುತ್ತಿದ್ದರು.

RELATED ARTICLES

Related Articles

TRENDING ARTICLES