Monday, December 23, 2024

ರಾಮ ಮಂದಿರ ಉದ್ಘಾಟನೆ ದಿನವೇ ಧೃವಾ ಸರ್ಜಾ ಇಬ್ಬರು ಮಕ್ಕಳ ನಾಮಕರಣ!

ಬೆಂಗಳೂರು: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಇಂದು ಬಾಲರಾಮನ ಪ್ರಾಣ ಪ್ರತಿಷ್ಠಾ ನಡೆಯಲಿದೆ ಈ ಸುಸಂದರ್ಭದಲ್ಲಿ ಸ್ಯಾಂಡಲ್​ವುಡ್​ನ ಆ್ಯಕ್ಷನ್​ ಪ್ರಿನ್ಸ್​ ಅರ್ಜುನ್​ ಸರ್ಜಾ ತಮ್ಮ ಇಬ್ಬರು ಮಕ್ಕಳಿಗೂ ಇಂದೇ ನಾಮಕರಣ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ : ಪ್ರಾಣ ಪ್ರತಿಷ್ಠಾ ಎಂದರೇನು?

ಅಪ್ಪಟ ಹನುಮ ಭಕ್ತರಾಗಿರುವ ಸರ್ಜಾ ಕುಂಟುಂಬದ ಕುಡಿಗಳಿಗೆ ಇಂದು ನಾಮಕರಣ ಮಾಡಲು ತಯಾರಿ ನಡೆಯುತ್ತಿದೆ. ನಟ ಧೃವ ಸರ್ಜಾ ಅವರ ಮಗಳು ಮತ್ತು ಮಗ ಇಬ್ಬರ ನಾಮಕರಣವನ್ನು ಕನಕಪುರದ ಬಳಿ ಇರುವ ಫಾರಂಹೌಸ್​ ನಲ್ಲಿ ನೆರವೇರಿಸಲಿದ್ದಾರೆ.

ಈ ಸುಸಂದರ್ಭದಲ್ಲಿ ಅರ್ಜುನ್​ ಸರ್ಜಾ ಫ್ಯಾಮಿಲಿ, ಧೃವಸರ್ಜಾ ಮತ್ತು ಚಿರುಸರ್ಜಾ ಪತ್ನಿ ಮೇಘನಾ ರಾಜ್​ ಮತ್ತು ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

RELATED ARTICLES

Related Articles

TRENDING ARTICLES