ಬೆಂಗಳೂರು : ಅಯೋಧ್ಯೆಯ ಬಾಲ ರಾಮನ ಪ್ರಾಣ ಪ್ರತಿಷ್ಠೆ ಆಗಿದೆ. ಇಂದು ಕೋಟ್ಯಂತರ ಭಕ್ತರ ಕನಸು ನನಸಾಗಿದೆ.
ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ತಲೆಬಾಗಿದೆ. ಈ ದಿನ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಮನ ವೇಷಭೂಷಣ ಹಾಕಿ ಸಂತೋಷ ಪಟ್ಟಿದ್ದಾರೆ.
ಈ ಎಲ್ಲಾ ಚಿತ್ರಗಳನ್ನು ಪವರ್ ಟಿವಿ ತೆರೆ ಮೇಲೆ ಪ್ರದರ್ಶನ ಮಾಡಿದ್ದು, ಪೋಷಕರು ನೋಡಿ ಆನಂದಿಸಿ ಸಂಭ್ರಮಿಸಿದ್ದಾರೆ. ಈ ಪೈಕಿ ಕೆಲ ಮುದ್ದು ಮಕ್ಕಳ ರಾಮ-ಸೀತೆ ವೇಷದ ಫೋಟೋಗಳು ಇಲ್ಲಿವೆ ನೋಡಿ.
ಅರುಣ ಸ್ವರೂಪ, ಹಾಸನ
ಹನ್ವಿತ್ ಜಿ ಗೌಡ, ನಾಗದೇವನಹಳ್ಳಿ, ಬೆಂಗಳೂರು
ಜೈನಶ್, ಹೊಸದುರ್ಗ
ತ್ರಿಶಿತ್, ಶಿವಮೊಗ್ಗ
ಘಾನವಿ ಶ್ರೀನಿವಾಸ್, ಚಳ್ಳಕೆರೆ
ಭವಿನ್, ಬೆಂಗಳೂರು
ಅಶುತೋಷ್ ಸಜಿಪ, ಮಂಗಳೂರು
ನಿತ್ಯಪ್ರಿಯ, ಹೊಳಲ್ಕೆರೆ
ಚಿತ್ರಾಂಕ್ ಹಾಗೂ ಸುರಗ್, ಪುತ್ತೂರು, ದಕ್ಷಿಣ ಕನ್ನಡ
ಶ್ರೀಹನ್ ಶರ್ವ, ಚಿತ್ರದುರ್ಗ
ಬೇಬಿ ಸಾಹಿತ್ಯ ಹಾಗೂ ಸಾನಿಧ್ಯ, ಹುಳಿಮಾವು, ಬೆಂಗಳೂರು
ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾ ಕಾರ್ಯವು ವಿಜೃಂಭಣೆಯಿಂದ ನೆರವೇರಿತು. ಪ್ರಧಾನಿ ಮೋದಿ ಈ ಕಾರ್ಯಕ್ಕೆ ಸಾಕ್ಷಿಯಾದರು. ಈ ಮೂಲಕ ಸುಮಾರು 500 ವರ್ಷಗಳಿಂದ ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ ಕನಸು ನನಸಾಯಿತು.
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮ ಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಾಗಿದೆ. ಇದರೊಂದಿಗೆ ರಾಮಮಂದಿರವು ಉದ್ಘಾಟನೆಯಾದಂತಾಗಿದ್ದು, ದೇಶಾದ್ಯಂತ ಸಂತಸ ಮನೆ ಮಾಡಿದೆ.