Wednesday, January 22, 2025

‘ಜೈ ಶ್ರೀರಾಮ್’ ಕೂಗಿ ಭಕ್ತರನ್ನು ಹುರಿದುಂಬಿಸಿದ ಸಿದ್ದರಾಮಯ್ಯ : ಇಲ್ಲಿದೆ ವಿಡಿಯೋ

ಬೆಂಗಳೂರು : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಜೈ ಶ್ರೀರಾಮ್’ ಘೋಷಣೆ ಮೊಳಗಿಸಿದ್ದಾರೆ.

ಬೆಂಗಳೂರಿನ ಬಿದರಿಹಳ್ಳಿ ಹೋಬಳಿಯಲ್ಲಿ ಸೀತಾರಾಮ ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ಅವರು, ಜೈ ಶ್ರೀರಾಮ್‌ ಎಂದು ಕೂಗಿ ಭಕ್ತರನ್ನು ಹುರಿದುಂಬಿಸಿದ್ದಾರೆ. ಈ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಜೈ ಶ್ರೀರಾಮ್ ಎನ್ನುವುದು ಯಾರೊಬ್ಬರ ಸ್ವತ್ತಲ್ಲ. ನಾವು ಹೇಳಲ್ವಾ..? ನಾವೂ ಹೇಳುತ್ತೇವೆ. ಜೈ ಶ್ರೀರಾಮ್.. ಯಾಕೆ, ನೀವು ಹೇಳಲ್ವಾ..? ನೀವು ಹೇಳಿ. ಮನಸ್ಸು ಶುದ್ಧವಾಗಿರುವ ಪ್ರತಿ ಜೀವದೊಳಗೂ ರಾಮನಿದ್ದಾನೆ. ನಮ್ಮ ರಾಮ ಪ್ರೀತಿ, ವಾತ್ಸಲ್ಯ, ಮಮತೆಯ ಪ್ರತಿರೂಪ. ಶ್ರೀರಾಮ ಸರ್ವರಿಗೂ ಒಳಿತು ಮಾಡಲಿ. ಜೈ ಶ್ರೀರಾಮ್ ಎಂದು ಘೋಷಣೆ ಮೊಳಗಿಸಿದ್ದಾರೆ.

ರಾಮನಿಂದ ವಚನ ಪರಿಪಾಲನೆ ಅಳವಡಿಸಿಕೊಂಡಿದ್ದೇನೆ

ರಾಮಭಕ್ತಿ ನಿರಂತರ. ವೈಯಕ್ತಿಕವಾಗಿ ನಾನು, ರಾಮನಿಂದ ವಚನ ಪರಿಪಾಲನೆಯನ್ನು, ಭೀಮನಿಂದ (ಡಾ. ಅಂಬೇಡ್ಕರ್‌) ಸಮತೆ ಅನುಷ್ಠಾನವನ್ನು, ಬಸವನಿಂದ ನುಡಿ, ನಡೆಯ ನಡುವೆ ಅಂತರವಿಲ್ಲದೆ ಬದುಕುವುದನ್ನು ನನ್ನಲ್ಲಿ ಅಳವಡಿಸಿಕೊಳ್ಳುತ್ತಲೇ ಮುಂದುವರಿದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

RELATED ARTICLES

Related Articles

TRENDING ARTICLES