ಉತ್ತರ ಪ್ರದೇಶ : ಪ್ರಧಾನಿ ನರೇಂದ್ರ ಮೋದಿಯಿಂದಲೇ ರಾಮಮಂದಿರ ನಿರ್ಮಾಣ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣ ಹೇಳಿದ್ದಾರೆ.
ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕುರಿತು ಮಾತನಾಡಿರುವ ಅವರು, ನರೇಂದ್ರ ಮೋದಿ ಪ್ರಧಾನಿ ಆಗಿರದೇ ಇದ್ದಿದ್ದರೆ ಎಂದಿಗೂ ರಾಮಮಂದಿರ ನಿರ್ಮಾಣ ಆಗುತ್ತಿರಲಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ರಾಮಮಂದಿರ ಹಾಗೂ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಸಂಪೂರ್ಣ ಶ್ರೇಯಸ್ಸು ಮೋದಿಗೆ ಸಲ್ಲುತ್ತದೆ. ನೆಹರೂ ಆದಿಯಾಗಿ ಯಾವ ಪ್ರಧಾನಿಯೂ ಮೋದಿಯಷ್ಟು ಪಯತ್ನ ನಡೆಸಿರಲಿಲ್ಲ. ವಿಹೆಚ್ಪಿ ಹಾಗೂ ಬಜರಂಗದಳದ ತ್ಯಾಗವೂ ಇದೆ ಎಂದು ಬಣ್ಣಿಸಿದ್ದಾರೆ.
ಕಾಂಗ್ರೆಸ್ ನಾಯಕರ ನಿರ್ಧಾರ ದುರದೃಷ್ಟಕರ
ಇನ್ನೂ ಕಾಂಗ್ರೆಸ್ ನಾಯಕರು ರಾಮಮಂದಿರ ಉದ್ಘಾಟನೆ ಆಹ್ವಾನ ತಿರಸ್ಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಈ ಸಮಾರಂಭದಿಂದ ದೂರ ಉಳಿದಿರುವುದು ದುರದೃಷ್ಟಕರ. ಒಬ್ಬ ಕ್ರಿಶ್ಚಿಯನ್ ಅಥವಾ ಪಾದ್ರಿ ಅಥವಾ ಮುಸ್ಲಿಂ ಕೂಡ ರಾಮನ ಆಹ್ವಾನವನ್ನು ನಿರಾಕರಿಸಲು ಸಾಧ್ಯವಿಲ್ಲ. ರಾಮ ಭಾರತದ ಆತ್ಮ. ರಾಮನಿಲ್ಲದೆ, ಭಾರತವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಪ್ರಮೋದ್ ಕೃಷ್ಣ ಕಳವಳ ವ್ಯಕ್ತಪಡಿಸಿದ್ದಾರೆ.