Sunday, December 22, 2024

ಶಿಲೆ, ಶಿಲ್ಪಿಯು, ನ್ಯಾಯಾಧೀಶರು ಕೂಡ ಕರ್ನಾಟಕದವರು : ರವಿ ಶಂಕರ್ ಗುರೂಜಿ

ಅಯೋಧ್ಯೆ : ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠೆ ಹಿನ್ನೆಲೆ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥಾಪಕ ಶ್ರೀ ರವಿ ಶಂಕರ್ ಗುರೂಜಿ ಅಯೋಧ್ಯೆ ತಲುಪಿದ್ದಾರೆ.

ಈ ವೇಳೆ ಪವರ್​ ಟಿವಿ ಪ್ರತಿನಿಧಿಯೊಂದಿಗೆ ವಿಶೇಷವಾಗಿ ಮಾತನಾಡಿರುವ ಅವರು, ದೇಶದಲ್ಲಿ ತುಂಬಾ ಉತ್ಸಾಹವಿದೆ. ಭಕ್ತಿಯ ಅಲೆ ಎದ್ದಿದೆ. ವಸುದೈವಕುಟುಂಬಕಂ ವಾಕ್ಯವನ್ನು ಯಥಾರ್ಥವಾಗಿ ಮಾಡಲಿ. ದೇಶ ಹಿಂಸಾ ಮುಕ್ತವಾಗಲಿ, ಜನ ಕಲ್ಯಾಣ ಆಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

500 ವರ್ಷಗಳ ಸಂಘರ್ಷ ಆದ ಮೇಲೆ ಫಲಿಸಿದೆ. ಎಷ್ಟೋ ತಲೆಮಾರು ಈ ಘಳಿಗೆಗಾಗಿ ಕಾದಿತ್ತು. ರಾಮಲಲ್ಲಾನ ಶಿಲೆಯು, ಅದನ್ನು ಕೆತ್ತಿದ ಶಿಲ್ಪಿಯೂ ಕರ್ನಾಟಕದವರು. ಸುಪ್ರೀಂ ಕೋರ್ಟ್ ಜಡ್ಜ್ ಕೂಡ ಕರ್ನಾಟಕದವರು. ಆದೇಶ ನೀಡುವ ಸಮಯದಲ್ಲಿ ಜಡ್ಜ್ ಕರ್ನಾಟಕದವರು. ಹಾಗಾಗಿ, ಕರ್ನಾಟಕಕ್ಕೆ ಮತ್ತು ಅಯೋಧ್ಯೆಯ ಶ್ರೀರಾಮನಿಗೂ ವಿಶೇಷ ನಂಟು ಎಂದು ರವಿಶಂಕರ್ ಗುರೂಜಿ ನುಡಿದಿದ್ದಾರೆ.

RELATED ARTICLES

Related Articles

TRENDING ARTICLES