Wednesday, January 22, 2025

ರಾಮಮಂದಿರ ಸ್ಫೋಟಿಸುವ ಬೆದರಿಕೆ : ಆರೋಪಿ ಯುವಕ ಬಂಧನ

ಬಿಹಾರ : ಅಯೋಧ್ಯೆಯ ರಾಮಮಂದಿರವನ್ನು ಸ್ಫೋಟಿಸುವುದಾಗಿ ಪೊಲೀಸರಿಗೆ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ಅರರಿಯಾದಲ್ಲಿ ಈ ಘಟನೆ ನಡೆದಿದೆ. ಇಂತೆಖಾಬ್ ಆಲಂ (21) ಎಂಬಾತನೇ ಬಂಧಿತ ಆರೋಪಿ. ಈತ ಜನವರಿ 22ರಂದು ರಾಮಮಂದಿರ ಸ್ಫೋಟಿಸುವುದಾಗಿ ಪೊಲೀಸರಿಗೆ ಕರೆ ಮಾಡಿ ಬೆದರಿಸಿದ್ದನು.

ಜನವರಿ 19ರಂದು 112 ನಂಬರ್​ಗೆ ಕರೆ ಮಾಡಿ, ನಾನು ದಾವೂದ್ ಇಬ್ರಾಹಿಂ ಸಹಚರ. ನನ್ನ ಹೆಸರು ಛೋಟಾ ಶಕೀಲ್. ಜನವರಿ 22ರಂದು ಅಯೋಧ್ಯೆಯಲ್ಲಿ ನಿರ್ಮಿಸಿರುವ ರಾಮಮಂದಿರವನ್ನು ಸ್ಫೋಟಿಸುತ್ತೇನೆ ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದನು.

ಈ ಸುದ್ದಿ ಓದಿದ್ದಿರಾ? : ಗೋದ್ರಾ ದುರಂತದಲ್ಲಿ ಸಾವಿಗೀಡಾದ 19 ಕುಟುಂಬಗಳಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ! 

ಬಂಧಿತ ಮಾನಸಿಕ ಅಸ್ವಸ್ಥ?

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಬಂಧಿತನು ಮಾನಸಿಕ ಅಸ್ವಸ್ಥನಂತೆ ಕಾಣುತ್ತಾನೆ. ಈತನಿಗೆ ಅಪರಾಧ ಹಿನ್ನೆಲೆ ಇಲ್ಲ. ಆತನ ಮೊಬೈಲ್​ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸೂಕ್ಷ್ಮ ವಿಷಯವಾಗಿರುವುದರಿಂದ ತನಿಖೆ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES