Monday, December 23, 2024

ಬಿಜೆಪಿ ಕಾರ್ಯಕರ್ತರಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್

ಬೆಂಗಳೂರು : ಭಾರತ್ ಜೋಡೋ ನ್ಯಾಯ್ ಯಾತ್ರೆ ವೇಳೆ ಬಿಜೆಪಿ ಧ್ವಜ ಹಿಡಿದು ಮೋದಿ.. ಮೋದಿ ಎಂದು ಜೈಕಾರ ಕೂಗಿದ ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅಸ್ಸಾಂನ ಸೋನಿತ್​ಪುರದಲ್ಲಿ ರಾಹುಲ್ ಗಾಂಧಿ ಬಸ್​ ಪ್ರಯಾಣಿಸುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಬಿಜೆಪಿ ಹಾಗೂ ಕೇಸರಿ ಧ್ವಜ ಹಿಡಿದು ಸುತ್ತುವರಿದರು.

ಜೈ ಶ್ರೀರಾಮ್ ಹಾಗೂ ಮೋದಿ.. ಮೋದಿ.. ಎಂದು ಘೋಷಣೆ ಮೊಳಗಿಸಿದರು, ಆಗ ಬಸ್ಸಿನಿಂದ ಕೆಳಗೆ ಇಳಿದ ರಾಹುಲ್ ಗಾಂಧಿ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡಲು ಮುಂದಾದರು. ಆದರೆ, ಕೂಡಲೇ ಭದ್ರತಾ ಸಿಬ್ಬಂದಿ ಅವರನ್ನು ಮರಳಿ ಬಸ್ಸಿಗೆ ಕರೆದುಕೊಂಡು ಹೋದರು.

ನಂತರ ಬಸ್​ ಹತ್ತಿ ಕಿಟಕಿ ಬಳಿಯೇ ರಾಹುಲ್ ಗಾಂಧಿ ಕುಳಿತುಕೊಂಡರು. ಈ ವೇಳೆ ಬಿಜೆಪಿ ಕಾರ್ಯಕರ್ತರಿಗೆ ಫ್ಲೈಯಿಂಗ್ ಕಿಸ್​ ನೀಡಿದರು. ಈ ವಿಡಿಯೋವನ್ನು ಸ್ವತಃ ರಾಹುಲ್​ ಗಾಂಧಿಯವರೇ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

RELATED ARTICLES

Related Articles

TRENDING ARTICLES