Saturday, January 18, 2025

ಮಿಸ್ಟರ್, ಜೋಶಿ ನಾಚಿಕೆ ಆಗಲ್ವಾ..? : ಮಾಜಿ ಸಂಸದ ಉಗ್ರಪ್ಪ

ಬೆಂಗಳೂರು : ಪ್ರಲ್ಹಾದ್ ಜೋಶಿ ಅವರೇ, ನಾಚಿಕೆ ಆಗಲ್ವಾ..? ಕೆಲವು ವಿಚಾರಗಳಿಗೆ ನಿಮ್ಮ ಬಳಿ ಉತ್ತರವೇ ಇಲ್ಲ. ಮೆಡಿಕಲ್ ಕಾಲೇಜು ಇಲ್ಲ, ರೈಲ್ವೆ ಪ್ರಾಪರ್ಟಿ ಬಗ್ಗೆ ಸುಳ್ಳು ಹೇಳ್ತೀರಾ..? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿರುದ್ಧ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿ ರೈಲ್ವೆ ಭೂಮಿ ಪರಭಾರೆ ವಿಚಾರವಾಗಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಏನ್ರೀ ಜೋಶಿ.. ನಮ್ಮನ್ನ ಹೆದರಿಸುತ್ತೀರೇನ್ರಿ. ಮೊದಲು ಟೆಂಡರ್ ಹಾಕಿದ್ದೀರಲ್ಲ ಅದು ರದ್ದು ಮಾಡಿ ಎಂದು ಕಿಡಿಕಾರಿದ್ದಾರೆ.

ಇಲ್ಲೊಬ್ಬ ಆಧುನಿಕ ರಾಮನ ಭಕ್ತನಿದ್ದಾರೆ. ಜನ ನಾಲ್ಕು ಬಾರಿ ವಿಶ್ವಾಸದಿಂದ ಮತ ಹಾಕಿದ್ದಾರೆ. ಅಲ್ಲಿನ ರಸ್ತೆಗಳು ಹದಗೆಟ್ಟಿವೆ, ಅಭಿವೃದ್ಧಿ ಇಲ್ಲ. ನಮಗೆ ಥ್ರೆಟ್ ಕೊಡ್ತೀರಾ ಜೋಶಿ ಅವರೇ.. ನಾವು ಚುನಾವಣೆಗೋಸ್ಕರ ಕೇಳುತ್ತಿಲ್ಲ. ಆ ಭಾಗದ ಜನರ ನ್ಯಾಯಕ್ಕಾಗಿ ಕೇಳುತ್ತಿದ್ದೇವೆ ಎಂದು ಹರಿಹಾಯ್ದಿದ್ದಾರೆ.

ಜೋಶಿ ನೀವು ಆಯ್ಕೆ ಆಗಿದ್ದು ಯಾವಾಗ?

ಹುಬ್ಬಳ್ಳಿಯಲ್ಲಿ ರೈಲ್ವೆ ಪ್ರಕರಣಕ್ಕೆ ಮೌನಿ ಬಾಬಾ ಆಗಿದ್ರು. ಕೋರ್ಟ್​ನಲ್ಲಿ ಕೇಸ್ ಹಾಕಿದ್ರೆ ನಾವು ಚಾಲೆಂಜ್ ಮಾಡುತ್ತೇವೆ. ಮಿಸ್ಟರ್, ಜೋಶಿ ನೀವು ಆಯ್ಕೆ ಆಗಿದ್ದು ಯಾವಾಗ..? ಅನಂತಕುಮಾರ್ ಹೆಗಡೆ ತಂದೆ ರೈಲ್ವೆ ಎಂಪ್ಲಾಯ್ ಆಗಿದ್ರು. ನೀವು ಇರುವ ಮನೆಯನ್ನು ಡೆಮಾಲಿಶ್ ಮಾಡಿ, ನಿಮ್ಮ ರೆಸಿಡೆನ್ಸಿ ಏರಿಯಾ ಕಮರ್ಷಿಯಲ್ ಏರಿಯಾ ಮಾಡಿದ್ದೀರಾ..? ಎಂದು ಉಗ್ರಪ್ಪ ಪ್ರಶ್ನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES