Sunday, December 22, 2024

ಅಮ್ಮ ಹೊಡೆದ್ರು ಅಂತ ಮಕ್ಕಳಿಂದ ಬರುತ್ತಿವೆ ತುರ್ತು ಕರೆಗಳು; ಹೈರಾಣಾದ ಪೊಲೀಸರು 

ಬೆಂಗಳೂರು: ಅಮ್ಮ ಹೊಡೆದ್ರು,ಆಟಕ್ಕೆ ಸೇರಿಸಿಕೊಳ್ತಿಲ್ಲ ಎಂದು ತುರ್ತುಸೇವೆ 112ಕ್ಕೆ ದೂರುಗಳು ಬರುತ್ತಿದ್ದು,ಪೊಲೀಸರಿಗೆ ತಲೆ ಬಿಸಿ ಮಾಡಿವೆ. 

ಆದರೆ ಪೊಲೀಸ್‌, ಆಂಬ್ಯುಲೆನ್ಸ್, ಅಗ್ನಿಶಾಸಮಕ ಸೇರಿದಂತೆ ಇನ್ನಿತರ ಯಾವುದೇ ತುರ್ತು ಸೇವೆ ಪಡೆಯಲು 112 ನಂಬರ್‌ ಡಯಲ್‌ ಮಾಡಿದರೆ ಸಾಕು ಸಂಬಂಧಿತ ಸಿಬ್ಬಂದಿ ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸುತ್ತಿದ್ದರು.ಆದರೆ ಈಗ ತುರ್ತುಸೇವೆ 112ಗೆ ಬರುತ್ತಿರುವ ಕರೆಗಳು ಪೊಲೀಸರಿಗೆ ತಲೆ ಬಿಸಿಯಾಗಿದ್ದು, ಸದ್ಯ ಮಕ್ಕಳ ಕೆಲ ಕರೆಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿವೆ.

ಅಮ್ಮನ ವಿರುದ್ಧವೇ ಪೊಲೀಸರಿಗೆ ಕರೆ ಮಾಡಿ ಪುಟ್ಟ ಬಾಲಕಿ

ಮಗಳು ಜಗಳ ಮಾಡಿಕೊಂಡಿದ್ದು ಅಮ್ಮನ ವಿರುದ್ಧವೇ ಪೊಲೀಸರಿಗೆ ಕರೆ ಮಾಡಿ ಪುಟ್ಟ ಬಾಲಕಿ ದೂರು ನೀಡಿದ್ದಾಳೆ. ಮಾಹಿತಿ ಕೇಳಲು ಕರೆ ಮಾಡಿದ್ದ ಪೊಲೀಸರಿಗೆ ತಾಯಿ ಬಾಯಿಗೆ ಬಂದಂತೆ ಬೈದು ಫೋನ್ ಇಟ್ಟಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿಕ್ಕ ವಿಷಯಕ್ಕೆ ತಾಯಿ ಹಾಗೂ ಪುಟ್ಟ ಮಗಳ ನಡುವೆ ಜಗಳ ಆಗಿ ತಾಯಿ ಮಗಳ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಬಾಲಕಿ 112 ಕರೆ ಮಾಡಿ ತಾಯಿ ಬಗ್ಗೆ ದೂರಿದ್ದಾಳೆ.

ಆಟಕ್ಕೆ ಸೇರಿಸಿಕೊಳ್ತಿಲ್ಲ ಎಂದು ದೂರು

ಕ್ರಿಕೆಟ್ ಆಡಲು ಸೇರಿಸಿಕೊಂಡಿಲ್ಲ ಎಂದು ಕರೆ ಮಾಡಲಾಗಿದೆ. ಓರ್ವ ಬಾಲಕ 112ಗೆ ಕರೆ ಮಾಡಿ ನನ್ನನ್ನು ಕ್ರಿಕೆಟ್ ಆಡಲು ಸೇರಿಸಿಕೊಳ್ಳುತ್ತಿಲ್ಲ. ಸಹಾಯ ಮಾಡಿ ಎಂದು ತುರ್ತು ಸೇವೆಗೆ ಕರೆ ಮಾಡಿದ್ದಾನೆ. ವಿಚಾರ ಸಣ್ಣದೆನಿಸಿದರೂ ಪೊಲೀಸರು ಸ್ಥಳಕ್ಕೆ ತೆರಳಿ ದೂರು ಸ್ವೀಕರಿಸಿ ಆತನ ಗೆಳೆಯರಿಗೆ ಬುದ್ದಿ ಹೇಳಿ ಆಟಕ್ಕೆ ಸೇರಿಸಿ ಬಂದರು.

ಬೆಂಕಿ ಅವಘಡ, ಅನಾರೋಗ್ಯ, ನೀರಿಗೆ ಬಿದ್ದಿರುವುದು, ಕಾನೂನು ಸುವ್ಯವಸ್ಥೆ, ಮಹಿಳಾ, ಮಕ್ಕಳ, ಹಿರಿಯ ನಾಗರಿಕರ ಹಾಗೂ ಇನ್ನಿತರ ಯಾವುದೇ ತುರ್ತು ಸಮಸ್ಯೆಗಳಿದ್ದರೂ ತಕ್ಷಣದ ನೆರವಿಗಾಗಿ ಸರ್ಕಾರ ತುರ್ತು ಸೇವೆ 112 ನಂಬರ್ ನೀಡಿದೆ. ಆದರೆ ಪುಟ್ಟ ಪುಟ್ಟ ಮಕ್ಕಳು ತಮ್ಮ ಚಿಕ್ಕ ಚಿಕ್ಕ ಸಮಸ್ಯೆಗಳಿಗೂ ತುರ್ತು ಸೇವೆ ನಂಬರ್​ಗೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ.

RELATED ARTICLES

Related Articles

TRENDING ARTICLES