ತುಮಕೂರು : ನಾಳೆ ನಾವೆಲ್ಲರೂ ಒಂದೂಗೂಡಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳೋಣ ಎಂದು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಕರೆ ಕೊಟ್ಟರು.
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಲಿಂ.ಡಾ. ಶಿವಕುಮಾರ ಶ್ರೀಗಳ 5ನೇ ಪುಣ್ಯ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಸಿಎಂ ಜೊತೆ ಭಾಗವಹಿಸಿ ಮಾತನಾಡಿದರು. ಅಣ್ಣ ಬಸವಣ್ಣನವರನ್ನ ಸಾಂಸ್ಕೃತಿಕ ರಾಯಭಾರಿಯಾಗಿ ಘೋಷಣೆ ಮಾಡಿರೋದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಶ್ರೀಮಠಕ್ಕೆ ಬಂದಿರೋದು ನಮ್ಮೆಲ್ಲರಿಗೂ ಪುಣ್ಯ ದಿನ. ದಾಸೋಹ ದಿನ ಎಂಬುದು ನಮ್ಮೆಲ್ಲರ ಪುಣ್ಯದಿನ. ಶ್ರೀಗಳು ದಾಸೋಹದ ಮಹತ್ವ ವಿಶ್ವಕ್ಕೆ ಸಾರಿದವರು. ಆರೋಗ್ಯ ಶಿಕ್ಷಣ ದಾಸೋಹ ಸೇವೆಗಳನ್ನ ಮಠಗಳು ನೀಡುತ್ತೀವೆ. ಇದರ ಮುಂದಿನ ಭಾಗವಾಗಿ ಸಿದ್ದಗಂಗಾ ಆಸ್ಪತ್ರೆ ಸಿದ್ದಗೊಂಡಿದೆ. ನಮ್ಮ ಹಿಂದೂ ಸಮಾಜದ ಮಠ ಮಾನ್ಯಗಳು ಸೇವೆಗಳನ್ನ ನೀಡುವಲ್ಲಿ ಹಿಂದೆ ಬೀಳಬಾರದು ಎಂದು ತಿಳಿಸಿದರು.
ಹಿಂದೂ ಧರ್ಮ ಜಗತ್ತನ್ನ ಸೆಳೆಯುತ್ತಿದೆ
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶೇಕಡಾ10% ಬಡವರಿಗೆ ಮೀಸಲಿಡುವಂತೆ ಎಲ್ಲಾ ಮಠಾಧೀಶರಲ್ಲಿ ಮನವಿ ಮಾಡುತ್ತೇನೆ. ಹಿಂದೂ ಸಮಾಜದ ಮೇಲೆ ಆಗಿರೋ ಅಕ್ರಮ ಯಾವ ಧರ್ಮದ ಮೇಲೂ ಆಗಿರಲಿಕ್ಕಿಲ್ಲ. ಹಿಂದೂ ಧರ್ಮ ಜನರನ್ನ ಆಕರ್ಷಿಸುತ್ತಿದೆ, ಜಗತ್ತನ್ನ ಸೆಳೆಯುತ್ತಿದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.